ಚುನಾವಣೆಗೆ ಮುನ್ನವೇ ಬಾಗೇಪಲ್ಲಿ ಜೆಡಿಎಸ್ ಪಕ್ಷದಲ್ಲಿ ಬಂಡಾಯ ಸ್ಫೋಟ- ನಾಗರಾಜರೆಡ್ಡಿ ಅಖಾಡಕ್ಕೆ ತೀವ್ರ ವಿರೋಧ

ಚುನಾವಣೆಗೆ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಂಡಾಯದ ಬಿಸಿ ಎದುರಿಸುತ್ತಿದೆ. ಜೆಡಿಎಸ್ ಟಿಕೇಟ್ ಆಕಾಂಕ್ಷಿ ಡಿ.ಜೆ.ನಾಗರಾಜರೆಡ್ಡಿ ಅವರಿಗೆ ಟಿಕೇಟ್ ನೀಡದಂತೆ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ಒಂದು ವೇಳೆ ನಾಗರಾಜರೆಡ್ಡಿಗೆ ಜೆಡಿಎಸ್ ಪಕ್ಷ ಟಿಕೆಟ್ ನೀಡಿದರೆ ತಾಲ್ಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಯಾವುದೇ ಕಾರಣಕ್ಕೂ ಡಿ.ಜೆ.ನಾಗರಾಜರೆಡ್ಡಿ ಅವರಿಗೆ ಟಿಕೆಟ್ ನೀಡಬಾರದು, ಕ್ಷೇತ್ರದ ಜನರ ವಿಶ್ವಾಸವಿಲ್ಲದ ಅವರಿಗೆ ಟಿಕೆಟ್ ನೀಡೋ ಬದಲು ಗೆಲ್ಲುವ ಕುದುರೆಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರಿಗೆ ನೀಡಬೇಕೆಂದು ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ.

 

ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ವರಿಷ್ಠರು ನಾಗರಾಜರೆಡ್ಡಿಗೆ ಟಿಕೆಟ್ ನೀಡಿದ್ದೇ, ಆದರೆ ಮುಂದಿನ ಪರಿಣಾಮ ಪಕ್ಷ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

 

ವರದಿ: ಮಲ್ಲಪ್ಪ. ಎಂ.ಶ್ರೀರಾಮ್. ಬಿಟಿವಿ ನ್ಯೂಸ್. ಚಿಕ್ಕಬಳ್ಳಾಪುರ