Bahubali 2 – Public came to see movie in Midnight

0
25

ಎಸ್​​ಎಸ್​ ರಾಜಮೌಳಿ ನಿರ್ದೇಶನದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಮೂವಿ ಬಾಹುಬಲಿ ದಿ ಕನ್​​ಕ್ಲೂಷನ್​​ , ಇವತ್ತು ಬೆಳಗ್ಗೆಯಿಂದಲೇ ತೆರೆ ಮೇಲೆ ಅಬ್ಬರಿಸುತ್ತಿದೆ. ತೆಲುಗು, ಹಿಂದಿ , ತಮಿಳು ಮೂರು ಭಾಷೆಯಲ್ಲಿ ಚಿತ್ರ ರಿಲೀಸ್​ ಆಗಿದ್ದು, ವಿಶ್ವದಾದ್ಯಂತ 9 ಸಾವಿರ ಪರದೆಗಳಲ್ಲಿ ಚಿತ್ರ ಪ್ರದರ್ಶನವಾಗ್ತಿದೆ. ಕರ್ನಾಟಕದ ಸುಮಾರು 200 ಚಿತ್ರ ಮಂದಿರಗಳಲ್ಲಿ ಸಿನಿಮಾ ರಿಲೀಸ್​ ಆಗಿದ್ದು, ನಿನ್ನೆ ರಾತ್ರಿಯಿಂದಲೇ ಬಾಹುಬಲಿ ತೆರೆ ಮೇಲೆ ಅಬ್ಬರಿಸುತ್ತಿದ್ದಾನೆ.
=====
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಾಹುಬಲಿ ಚಿತ್ರದ ಹವಾ ಜೋರಾಗಿದೆ. ನಿನ್ನೆ ರಾತ್ರಿಯೇ ಸಿನಿಮಾ ನೋಡಲು ಬಂದ ಜನರು , ಟಿಕೆಟ್​ ಖರೀದಿಸಿ ,ಘೋಷಣೆಗಳನ್ನ ಕೂಗಿ ಸಂಭ್ರಮಿಸಿದ್ರು.
===
ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನ ಮಲ್ಟಿಪ್ಲೆಕ್ಸ್​​ಗಳಲ್ಲೂ ಬಾಹುಬಲಿ ಅಬ್ಬರ ಜೋರಾಗಿದೆ. 8 ಸ್ಕ್ರೀನ್​ಗಳಲ್ಲಿ ರಾತ್ರಿ 10 ಗಂಟೆಯಿಂದ ಚಿತ್ರ ಪ್ರದರ್ಶನ ಶುರುವಾಗಿದ್ದು, DRC ಮಲ್ಟಿಪ್ಲೆಕ್ಸ್​​ನಲ್ಲಿ ಜನ್ರು ಮುಗಿಬಿದ್ದು ಟಿಕೆಟ್​ ಖರೀದಿಸಿದ್ರು.
===
ಇನ್ನು ಗಣಿನಾಡು ಬಳ್ಳಾರಿಯಲ್ಲಿ ಬಾಹುಬಲಿ ಫೀವರ್​ ಜೋರಾಗಿತ್ತು. ರಾತ್ರಿಯಿಂದಲೇ ಟಿಕೆಟ್​ ಖರೀದಿಸಲು ಜನ , ಫಸ್ಟ್​ ಶೋ ನೋಡಿ ಬಂದ ಜನ್ರು ಫುಲ್​ ಖುಷಿಯಾಗಿತ್ತು.
====
ಕೋಲಾರದಲ್ಲಿ ಎರಡು ಚಿತ್ರಮಂದಿರದಲ್ಲಿ ಬಾಹುಬಲಿ ಚಿತ್ರ ಬಿಡುಗಡೆಯಾಗಿದ್ದು, ನಾರಾಯಣಿ ಚಿತ್ರಮಂದಿರದಲ್ಲಿ ಮೊದಲ ಶೋ ಗೆ ಟಿಕೆಟ್ ಗೆ 400-500 ರೂ ವಸೂಲಿ ಮಾಡಿದ್ದಾರೆ, ಸರ್ಕಾರ ಟಿಕೆಟ್ ದರ ಗರಿಷ್ಟ 200 ರುಪಾಯಿಗೆ ನಿಗದಿ ಪಡಿಸಿದ್ದು , 400ರಿಂದ 500 ರುಪಾಯಿ ವಸೂಲಿ ಮಾಡಿದಕ್ಕೆ ಅಭಿಮಾನಿಗಳಿಂದ ಆಕ್ರೋಶ.

LEAVE A REPLY

Please enter your comment!
Please enter your name here