ಮಾರತಹಳ್ಳಿಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.  ಮಾರತಹಳ್ಳಿ ರಿಂಗ್​​ ರೋಡ್​​ನಲ್ಲಿರುವ ಸೆಸ್ನಾ ಟೆಕ್​ ಪಾರ್ಕ್​ನಲ್ಲಿ ಘಟನೆ ನಡೆದಿದೆ.

ಮೃತಳನ್ನು 24 ವರ್ಷದ ಗೀತಾಂಜಲಿ ಎಂದು ಗುರುತಿಸಲಾಗಿದೆ.  ಸೆಸ್ನಾ ಕಟ್ಟಡದ 10 ನೇ ಅಂತಸ್ತಿನಿಂದ ಗೀತಾಂಜಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ  ಗೀತಾಂಜಲಿ ಮುಖ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆ 10 ನೇ ಅಂತಸ್ತಿನಿಂದ ಜಾರಿ ಬಿದ್ದಿದ್ದಾರೋ, ಅಥವಾ ಆತ್ಮಹತ್ಯೆಯೋ ಕೊಲೆಯೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ  ಮಾರತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Watch Here: https://youtu.be/SahKMd1sqLw