ಅಜ್ಜಿ-ತಾತನ ಸಾವಿಗೆ ಮುಹೂರ್ತ ಬರೆದ ಮೊಮ್ಮಗ- ಇದು ನೋ ಪಾಕೆಟ್ ಮನಿ ಎಂದಿದ್ದಕ್ಕೆ‌ ಸಿಕ್ಕ ಗಿಫ್ಟ್

ಆ ವೃದ್ಧ ದಂಪತಿ ನಿಯತ್ತಾಗಿ ದುಡಿದು ಆಸ್ತಿ ಸಂಪಾದಿಸಿದ್ದರು. ಇದ್ದೊರ್ವ ಮಗನಿಗಾಗಿ ಆಸ್ತಿ ಕೂಡಿಟ್ಟುಕೊಂಡು ಬದುಕುತ್ತಿದ್ದರು. ಆದರೇ ಉಂಡಾಡಿ ಗುಂಡನಂತೆ ತಿರುಗುತ್ತಿದ್ದ ಪೋಲಿ ಮೊಮ್ಮಗನಿಗೆ ಆ ಆಸ್ತಿಯ ಮೇಲೆ ಕಣ್ಣು ಬಿದ್ದಿತ್ತು. ಅಷ್ಟೇ ನೋಡಿ ಆ ಮೊಮ್ಮಗ ತಾನು ಆಡಿ ಬೆಳೆದ ಮಡಿಲನ್ನೆ ಬಗೆದು ಬಿಟ್ಟಿದ್ದಾನೆ. ಹೌದು ನಿನ್ನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಮೊಮ್ಮಗನೇ ಸೂತ್ರದಾರ ಎಂಬ ಸಂಗತಿ ಬೆಳಕಿಗೆ ಬಂದಿದ್ದು ಸಿಲಿಕಾನ ಸಿಟಿ ಬೆಚ್ಚಿ ಬಿದ್ದಿದೆ.
ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಎಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥ್ ನಗರದಲ್ಲಿ ಎಚ್ ಬಿಇಎಲ್ ಮಾಜಿ ಉದ್ಯೋಗಿ ಗೋವಿಂದನ್ ಹಾಗು ಅವರ ಪತ್ನಿ ಸರೋಜಮ್ಮರ ಶವ ಮನೆಯಲ್ಲೇ ಪತ್ತೆಯಾಗಿತ್ತು. ಮನೆಯಲ್ಲೇ ದಂಪತಿಯನ್ನು ಬರ್ಭರವಾಗಿ ಹತ್ಯೆಗೈಯ್ದ ಬಳಿಕ ಅವರ ಕೈಗಳನ್ನು ಕಟ್ಟಿ ಹಾಕಿ‌ ಅಲ್ಲಿಂದಿಲ್ಲಿಗೆ ಎಳೆದಾಡಲಾಗಿತ್ತು. ಅಷ್ಟೇ ಅಲ್ಲ ಶವಗಳ ಸಮೇತ ಮನೆಯನ್ನು ಸ್ಪೋಟಿಸುವ ಸಂಚು ಕೂಡ ನಡೆದಿತ್ತು. ಮೇಲ್ನೋಟಕ್ಕೆ ಈ ಹತ್ಯೆ ದ್ವೇಷಕ್ಕೆ ನಡೆದಿರೋದು ಎಂಬುದು ಖಚಿತವಾಗಿತ್ತು. ಅಪಾರ ಆಸ್ತಿ ಒಡೆಯರಾಗಿದ್ದ ಈ ದಂಪತಿಯನ್ನು ಆಸ್ತಿ,ಹಣಕಾಸಿನ ವಿಚಾರಕ್ಕೆ ಸಂಬಂಧಿಕರೇ‌ ಹತ್ಯೆ ನಡೆಸಿರುವ ಶಂಕೆ ಪೊಲೀಸರಿಗಿತ್ತು. ಇದೀಗ ತನಿಖೆ ಕೈಗೊಂಡ ಪೊಲೀಸರು ಪ್ರಕರಣ ಬೆಳಕಿಗೆ ಬಂದ ೨೪ ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಮೂರು ವಿಶೇಷ ತನಿಖಾ ತಂಡಗಳನ್ನು ಮಾಡಿಕೊಂಡ ತನಿಖೆ ಆರಂಭಿಸಿದ ಪೊಲೀಸರಿಗೆ ಸುಲಭವಾಗಿಯೇ ಪ್ರಕರಣದ‌ ಪ್ರಮುಖ ಆರೋಪಿ ಹತ್ಯೆಯಾದ ದಂಪತಿಗಳ‌ ಮೊಮ್ಮಗ ಪ್ರಮೋದ್ ಸಿಕ್ಕಿಬಿದ್ದಿದ್ದಾನೆ. ಹತ್ಯೆಗೆ ಎರಡು ದಿನ ಮೊದಲು‌ ಮೊಮ್ಮಗ ವೃದ್ಧ ದಂಪತಿ ಜೊತೆ ಜಗಳವಾಡಿದ್ದ ಎಂಬ ಕ್ಲೂ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಪ್ರಮೋದ್ ವಿಚಾರಣೆ ಆರಂಭಿಸುತ್ತಿದ್ದಂತೆ ಸತ್ಯ ಬಾಯಿ ಬಿಟ್ಟಿದ್ದಾನೆ.

 

ಪ್ರೇಯಸಿಯೊಂದಿಗೆ ಟ್ರಿ ಹೋಗಲು ಆಕೆಗೆ ಗಿಫ್ಟ್ ಕೊಡಿಸಲು ಪ್ರಮೋದ್ ತಾತನ ಬಳಿ‌ದುಡ್ಡು ಕೇಳಿದ್ದ. ಆದರೇ ವೃದ್ಧ ದಂಪತಿ‌ಈ ರೀತಿಯ ದುಂದುವೆಚ್ಚಗಳಿಗೆ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪ್ರಮೋದ್ ತನ್ನ ಸ್ನೇಹಿತರಾದ ಪ್ರವೀಣ್ ಹಾಗು ಹಸನ್ ಪಾಷ ಜೊತೆಗೂಡಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಪ್ರಮೋದ್‌ ಹಾಗೂ ಪ್ರವೀಣ್ ವಶಕ್ಕೆ ಪಡೆದ ಪೊಲೀಸರು ಹತ್ಯೆಗೆ ಸುಫಾರಿ ಪಡೆದ ಹಸನ್ ಪಾಷಾನನ್ನು ಬಂಧಿಸಲು ತೆರಳಿದಾಗ ಹೈಡ್ರಾಮಾವೊಂದ ನಡೆದಿದೆ. ಸುಫಾರಿ ಹತ್ಯೆ ನಡೆಸಿದ ಆರೋಪಿ ಪಾಷಾ ಪೊಲೀಸರಿಗೆ ಚಾಕು ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಜಾಗೃತರಾದ ಪೊಲೀಸರು ಪ್ರಾಣ ರಕ್ಷಿಸಿಕೊಳ್ಳಲು ಫೈರಿಂಗ್ ನಡೆಸಿದ್ದಾರೆ. ಯಮಲೂರಿನಲ್ಲಿದ್ದಾನೆ ಎಂಬ ಮಾಹಿತಿ ಕಲೆ ಹಾಕಿದ ಎಚ್ ಎ ಎಲ್ ನ ಸಬ್ ಇನ್ಸಪೆಕ್ಟರ್ ಪ್ರಶೀಲಾ ಹಾಗೂ ತಂಡ ಬಂಧಿಸಲು ತೆರಳಿದಾಗ ಈ ಘಟನೆ ನಡೆದಿದ್ಸು ಪೇದೆ ರವಿ ರಕ್ಷಿಸಲು ಸಬ್ ಇನ್ಸಪೆಕ್ಟರ್ ಫೈರಿಂಗ್ ‌ನಡೆಸಿದ್ದಾರೆ.‌ಇದೀಗ ಗಾಯಾಳುವನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು ಉಳಿದ‌ ಆರೋಪಿಗಳನ್ನು‌ ವಿಚಾರಣೆಗೊಳಪಡಿಸಲಾಗುತ್ತಿದೆ. ಏನೇ ಆದರೂ ಅಜ್ಜಿ-ತಾತನ‌ ಮಡಿಲಲ್ಲಿ ಆಡಿ‌ ಬೆಳೆದ‌ ಮೊಮ್ಮಗನೇ ಅವರ ಸಾವಿಗೆ ಮುಹೂರ್ತ ಫಿಕ್ಸ್‌ ಮಾಡಿದ್ದು ಮಾತ್ರ‌ ನಿಜಕ್ಕೂ ದುರಂತವೇ ಸರಿ. ಕೇವಲ ಆಸ್ತಿಗಾಗಿ ಮೊಮ್ಮಗನೇ ವೃದ್ಧ ಜೀವಗಳ ಪಾಲಿಗೆ ಯಮನಾಗಿದ್ದನ್ನು ಕಂಡು ಗೋವಿಂದರಾಜ್ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.ಪ್ರಕರಣದಲ್ಲಿ ಮೊಮ್ಮಗ ಪ್ರಮೋದ್‌ ಜೊತೆ ಇನ್ಯಾರಾದ್ರೂ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರಾ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.