ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ ಯೋಗರಾಜ್ ಭಟ್

ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ ಈಗಾಗಲೇ ಫಿಲಂ ಚೆಂಬರ್ ಗೂ ದೂರು ನೀಡಿದ್ದ ಯೋಗರಾಜ್ ಭಟ್ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ವಿರುದ್ಧ ನ್ಯಾಯಾಲಯದ‌ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಯೋಗರಾಜ್ ಭಟ್,
ಇಂದು ಕೋರ್ಟ್ ನಲ್ಲಿ ಕನಕಪುರ ಶ್ರೀನಿವಾಸ್ ವಿರುದ್ದ ದೂರು ದಾಖಲಿಸಿದ್ದೇನೆ. ನನ್ನ ಸಂಭಾವನೆ ಪಡೆದುಕೊಳ್ಳಲು ಈ ಕ್ರಮಕೈಗೊಳ್ಳುವುದು ನನಗೆ ಅನಿವಾರ್ಯವಾಯಿತು ಎಂದರು.

ಇನ್ನು ಈ ಬಗ್ಗೆ ಮಾಹಿತಿ‌ ನೀಡಿದ ಯೋಗರಾಜ್ ಭಟ್ ಪರ ಲಾಯರ್ ಶಾಂತಿ ಭೂಷಣ್ ಕನಕಪುರ ಶ್ರೀನಿವಾಸ ವಿರುದ್ಧ ಕೇಸ್ ರಿಜಿಸ್ಟರ್ ಆಗಿದೆ. ಇದೇ ೨೭ ರಂದು ಸಮನ್ಸ್ ಜಾರಿ ಯಾಗಲಿದ್ದು. ವಿಚಾರಣೆ ನಡೆಯಲಿದೆ ಎಂದರು. ಒಟ್ಟಿನಲ್ಲಿ ಕೆಲಸ ಮಾಡಿ ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರುವಂತಹ ಸ್ಥಿತಿ ಬಂದಿರುವುದು ಸ್ವತಃ ಯೋಗರಾಜ್ ಭಟ್ ರ ಅಸಮಧಾನಕ್ಕೂ ಕಾರಣವಾಗಿದೆ.