ವೆಜ್​ ಟಿಕ್ಕಾದಲ್ಲಿ ಸಿಕ್ಕಿದ್ದು ಹುಳು! ಇದು ಫೇಮಸ್​ ರೆಸ್ಟೋರೆಂಟ್​ನ ಕರ್ಮಕಾಂಡ!!

ನೀವು ಪ್ಯೂರ್​​​ ವೆಜಿಟೇರಿಯನಾ..ಹಾಗಾದ್ರೆ ಇನ್ನು ಮುಂದೆ ಪಿಜ್ಜಾ ಬರ್ಗರ್​ ತಿನ್ನುವ ಮುನ್ನ ಸ್ವಲ್ಪ ಎಚ್ಚರವಾಗಿರಿ. ಹೌದು ಬೆಂಗಳೂರಿನ ಸಬ್​ ವೇ ರೆಸ್ಟೋರೆಂಟ್​ ಒಂದರಲ್ಲಿ ವೆಜಿಟೆಬಲ್​ ಪನ್ನಿರ್ ಟಿಕ್ಕಾದಲ್ಲಿ ಹುಳ ಪತ್ತೆಯಾಗಿದೆ.

ad

ಇನ್​​ ಫೆಂಟ್ರಿ ರಸ್ತೆಯಲ್ಲಿರೋ ಸಭ್​ ವೇ ರೆಸ್ಟೋರೆಂಟ್​​ಗೆ ಫ್ಯಾಮಿಲಿ ಜೊತೆ ಹೋಗಿದ್ದ ಗುರುಚರಣ್​​ ವೆಜ್​​ ಟಿಕ್ಕಾವನ್ನು ಆರ್ಡರ್​ ಮಾಡಿದ್ರು. ಅದರಲ್ಲಿ ಹುಳು ಪತ್ತೆಯಾಗಿದ್ದು. ಕೂಡಲೇ ಗುರುಚರಣ್​ ಮ್ಯಾನೇಜರ್​ಗೆ ದೂರು ನೀಡಿದ್ದಾರೆ.

ಆದರೆ ದೂರು ಸ್ವೀಕರಿಸಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಹೊಟೇಲ್ ಮ್ಯಾನೇಜರ್​ ಗ್ರಾಹಕ ಗುರುಚರಣ್​ಗೆ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುರುಚರಣ್​ ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.