ಸೂರ್ಯ ಹುಟ್ಟುವ ಮೊದಲೇ ಇಲ್ಲಿ ತೆರೆದಿರುತ್ತವೆ ಬಾರ್ ಗಳು. ಕುಡುಕರೇ ನಮ್ಮ ಅನ್ನದಾತರು ಸ್ವಾಮಿ..

ಕೋಲಾರದಲ್ಲಿ ಸೂರ್ಯ ಹುಟ್ಟುವ ಮೊದ್ಲೇ ಇಲ್ಲಿನ ಬಾರ್​ಗಳು ಕುಡುಕರನ್ನು ಸ್ವಾಗತ ಮಾಡಲು ಎದುರು ನೋಡ್ತಾ ಇರ್ತವೆ. ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 6-7 ಗಂಟೆಗೆ ಬಾರ್​ಗಳು ತೆರೆದಿರುತ್ತವೆ. ಟೀ, ತರಕಾರಿ, ದಿನಸಿ ಅಂಗಡಿಗಳು ತೆರೆಯೋ ಮುನ್ನವೇ ಇಲ್ಲಿನ ಬಾರ್​ಗಳು ಬಾಗಿಲು ತೆರೆಯುವ ಮೂಲಕ ಸರ್ಕಾರದ ಖಜಾನೆ ತುಂಬಿಸ್ತಾ ಇವೆ.

adಕುಡುಕರಿಗೆ ಸ್ವರ್ಗದಂತಿರುವ ಕೋಲಾರ ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲದಿದ್ದರೂ, ನೀರಿಗಿಂತ ಇಲ್ಲಿ ಯಥೇಚ್ಚವಾಗಿ ಮದ್ಯ ಸಿಗ್ತಾ ಇದೆ. ದಿನದ 24 ಗಂಟೆಯೂ ಸಲೀಸಾಗಿ ಇಲ್ಲಿ ಮದ್ಯ ಸಿಗುತ್ತೆ. ಇಷ್ಟು ಸಲ್ಲಿಸಾಗಿ ಮದ್ಯ ಸಿಗ್ತಿರೋದ್ರಿಂದ ಬೆಳಗ್ಗೆ ಕೆಲಸಕ್ಕೆ ರೈಲುಗಳಲ್ಲಿ ಹಾಗೂ ಬಸ್​ಗಳಲ್ಲಿ ಪ್ರಯಾಣ ಮಾಡೋ ಜನರಿಗೆ ಈ ಕುಡುಕರ ಕಾಟ ಹೇಳತೀರದಾಗಿದೆ. ಅಲ್ದೆ ಸಿಟಿ ರೋಡ್​ಗಳಲ್ಲಿ ಬದಿಯಲ್ಲಿ ಕುಡಿದು ಬೀಳುವ ದೇವದಾಸರಿಗೇನು ಕಮ್ಮಿ ಇಲ್ಲ.

ಇಷ್ಟಿದ್ರೂ ಇಲ್ಲಿನ ಅಬಕಾರಿ ಇಲಾಖೆ ಮಾತ್ರ ಬರೊವಷ್ಟು ದುಡ್ಡು ಬರ್ಲಿ ಅಂತ ಸುಮ್ಮನಾಗಿ ಕುಳಿತಿದೆ. ಹೀಗಾಗಿ ಇಲ್ಲಿನ ಪ್ರಜ್ಞಾವಂತ ಜನ ಸರ್ಕಾರದ ನಿಗದಿಪಡಿಸಿರುವ ಸಮಯಕ್ಕೆ ಬಾರ್​ಗಳು ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ.