BBMP Pourakarmikas Planning to Protest in Bangalore | ಬೆಂಗಳೂರು ಕಸ ಈ ಹಿಂದೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ರಾಜಧಾನಿಯ ಮಾನ ಕಳೆದಿದೆ. ಇದೀಗ ಮತ್ತೆ ಐಟಿಸಿಟಿ ಮಾನ ಹರಾಜಾಗಲಿದೆ.

0
11

ಬೆಂಗಳೂರು ಕಸ ಈ ಹಿಂದೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ರಾಜಧಾನಿಯ ಮಾನ ಕಳೆದಿದೆ. ಇದೀಗ ಮತ್ತೆ ಐಟಿಸಿಟಿ ಮಾನ ಹರಾಜಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೃಹತ್​​ ಹೋರಾಟಕ್ಕೆ ಪೌರಕಾರ್ಮಿಕರು ಸಜ್ಜಾಗಿದ್ದಾರೆ. ಗುತ್ತಿಗೆ ಪದ್ಧತಿ ರದ್ದು, ಹುದ್ದೆ ಖಾಯಂಗೆ ಆಗ್ರಹಿಸುತ್ತಿರುವ ನೌಕರರು, ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಒಂದ್ವೇಳೆ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಜೂನ್​​ 12ರಿಂದ ಸ್ವಚ್ಛತೆ ಸೇರಿ ಯಾವುದೇ ಕೆಲಸ ನಿರ್ವಹಿಸದೇ ಪೊರಕೆ ಪ್ರದರ್ಶನದ ಮೂಲಕ ಹೋರಾಟ ನಡೆಸೋದಾಗಿ ಬಿಟಿವಿಗೆ ರಾಜ್ಯ ಪೌರ ಕಾರ್ಮಿಕರ ಸಂಘ ಮಾಹಿತಿ ನೀಡಿದೆ. ಹೀಗಾಗಿ, ಐಟಿಸಿಟಿ ಬೆಂಗಳೂರು ಕಸದಿಂದ ಮತ್ತೆ ಗಬ್ಬೆದ್ದು ನಾರಲಿದೆ.

LEAVE A REPLY

Please enter your comment!
Please enter your name here