ಕ್ರಿಕೆಟ್ ಗೆ ಎದುರಾಗಿದೆ ‘ಪಾಕ್’ ಕಂಟಕ

ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ ನಲ್ಲಿ ಪಂದ್ಯವಾಡದಂತೆ ಹಾಗೂ ಪಾಕಿಸ್ತಾನವನ್ನು ಕೂಟದಿಂದ ಬಹಿಷ್ಕರಿಸುವಂತೆ ಬಿಸಿಸಿಐ, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಮನವಿ ಸಲ್ಲಿಸಲಿದೆ ಎಂದು ವರದಿಯಾಗಿತ್ತು.

ಒಂದು ವೇಳೆ ನಿರ್ಣಾಯಕ ಘಟ್ಟದಲ್ಲಿ ಪಾಕ್ ಎದುರಾಳಿಯಾದರೆ ಏನು ಮಾಡುವುದು ಎಂಬ ಉಭಯ ಸಂಕಟ ಭಾರತದ್ದಾಗಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಅನಿಶ್ಚಿತತೆ ಮುಂದುವರಿದಿದೆ.


ಆದರೆ ಭಾರತ , ಐಸಿಸಿ ಮೇಲೆ ಒತ್ತಡ ತರಲಾಗದು, ಐಸಿಸಿಯ ಎಲ್ಲಾ ರಾಷ್ಟ್ರಗಳಿಗೂ ವಿಶ್ವಕಪ್ ಕೂಟದಲ್ಲಿ ಆಡುವ ಅರ್ಹತೆ ಇರುತ್ತದೆ. ಒಂದು ದೇಶ ಹೇಳಿದ ಮಾತ್ರಕ್ಕೆ ಮತ್ತೊಂದು ಸದಸ್ಯ ರಾಷ್ಟ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಹೀಗಾಗಿ ಬಿಸಿಸಿಐ ಹೇಳಿದರೂ ಐಸಿಸಿ ಇದಕ್ಕೆ ಒಪ್ಪದು. ಈ ವಿಚಾರದಲ್ಲಿ ಬಿಸಿಸಿಐ ಏನೂ ಮಾಡಲಾಗದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.