ಇನ್ನು ನಿಂತಿಲ್ಲ ಬಿಡಿಎ ಅಧಿಕಾರಿಗಳ ಲಂಚಾವತಾರ- ಕಾಸಿಗೆ ಮಾರಾಟಕ್ಕಿದೆ ಸಿಎ ಸೈಟ್​​!

ಅತ್ತ ರಾಜ್ಯ ಚುನಾವಣೆಯ ಸಿದ್ಧತೆಯಲ್ಲಿ ಮುಳುಗಿದ್ದರೇ ಇತ್ತ ಬಿಡಿಎ ಅಧಿಕಾರಿಗಳು ಮಾತ್ರ ಲಂಚದಾಸೆಗೆ ಸೈಟ್​ಗಳ ಮಾರಾಟದಲ್ಲಿ ಬ್ಯಸಿಯಾಗಿದ್ದರು. ಹೌದು ಇದೀಗ ಬಿಡಿಎಯ ಮತ್ತೊಂದು ಗೋಲ್​ಮಾಲ್​ ಬಯಲಿಗೆ ಬಂದಿದ್ದು, ಭ್ರಷ್ಟ ಅಧಿಕಾರಿಗಳು ಲಂಚದ ಆಸೆಗೆ ಮಕ್ಕಳ ಆಟದ ಮೈದಾನವನ್ನೇ ಮಾರಿಕೊಂಡಿದ್ದಾರೆ.

ad


ನಂದಿನಿಲೇಔಟ್​ನಲ್ಲಿ ಇಂತಹದೊಂದು ಗೋಲ್​ ಮಾಲ್​ ನಡೆದಿದ್ದು, ಕೋಟಿ ರೂಪಾಯಿ ಲಂಚದ ಆಸೆಗಾಗಿ ಇಲ್ಲಿ ಬಿಡಿಎ ಅಧಿಕಾರಿಗಳು ಆಟದ ಮೈದಾನವನ್ನೇ ಮಾರಿಕೊಂಡಿದ್ದಾರೆ. ಸಿಎ ಸೈಟ್‌ನಲ್ಲಿ ಉದ್ದೇಶಿತ ಕಾರ್ಯವಲ್ಲದೇ ಬೇರೆ ಯಾವುದೇ ಚಟುವಟಿಕೆಗಳು ಕೈಗೊಳ್ಳುವಂತಿಲ್ಲ ಎಂದು ನಿಯಮವನ್ನ ಗಾಳಿ ತೂರಿ ಒಳಾಂಗಣ ಕ್ರೀಡಾಂಗಣಕ್ಕೆ ಬಿಡಿಎ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.ನಂದಿನಿ ಲೇ ಔಟ್‌ನಲ್ಲಿ ಪ್ರೆಸಿಡೆನ್ಸಿ ಸ್ಕೂಲ್‌ (ಮೇ ಸೆಂಟ್‌ ಪಾಲ್) ಸ್ಕೂಲ್‌ಗಾಗಿ ಸಿಎ ಸೈಟ್‌ ನೀಡಿದ್ದಾರೆ. ಸಿಎ ಸೈಟ್‌ಗೆ ಹೊಂದಿಕೊಂಡಿರುವಂತೆಯೇ 686 ಚದರ ಅಡಿ ಜಾಗದಲ್ಲಿ ಮೈದಾನಕ್ಕಾಗಿ ಮೀಸಲಾಡಲಾಗಿದೆ. ಆದ್ರೀಗ, ಈ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡಿಎ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ವಿಪರ್ಯಾಸ ಅಂದ್ರೆ, ಇದೇ ಜಾಗದಲ್ಲಿ ಒಳಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿ ನೀಡಬೇಕು ಅಂತಾ 2013 ರಲ್ಲಿ ಶಾಲೆಯ ಆಡಳಿತ ಮಂಡಳಿ ಮನವಿಯನ್ನ ಸಲ್ಲಿಸಿತ್ತು. ಆದ್ರೆ, ಸಿಎ ಸೈಟ್‌ನಲ್ಲಿ ಬೇರೆ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಮನವಿಯನ್ನ ಬಿಡಿಎ ತಿರಸ್ಕರಿಸಿತ್ತು.

ಆದ್ರೆ, 2018ರ ಮಾರ್ಚ್‌ನಲ್ಲಿ ನಡೆದ ಬಿಡಿಎ ಬೋರ್ಡ್‌ ಮೀಟಿಂಗ್‌ನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ. ಒಳಾಂಗಣ ಕ್ರೀಡಾಂಗಣದ ಹೆಸರಿನಲ್ಲಿ ಕೋಟಿ ರೂಪಾಯಿ ಲಂಚವನ್ನ ನೀಡಿ 10 ಕೋಟಿ ಮೌಲ್ಯದ ಜಾಗವನ್ನ ಕಬಳಿಸಲು ಹುನ್ನಾರ ನಡೆಸಲಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಿಎ ಸೈಟ್‌ನಲ್ಲಿ ನಿಯಾಮಾವಳಿಗಳನ್ನ ಮೀರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.