ಬೆಳಗಾವಿ ಕರ್ನಾಟಕ ಸರ್ಕಾರದ್ದಲ್ಲವಂತೆ!! ಅದು ಕರ್ನಾಟಕಕ್ಕೆ ಪುಕ್ಕಟೆಯಾಗಿ ಸಿಕ್ಕಿದೆಯಂತೆ!!! ಹೊಡೆದಾಟಕ್ಕೆ ಸಿದ್ದರಿದ್ದೇವೆ!!

ಚುನಾವಣೆ ಸಮೀಪಿಸುತ್ತಿದ್ದಂತೆ ಸಾಕಷ್ಟು ಸಮಾಜ ಘಾತುಕ ಶಕ್ತಿಗಳು ಕೂಡ ತಮ್ಮ ಕುತಂತ್ರ ಹೆಣೆಯಲು ಪ್ರಯತ್ನಿಸುತ್ತಿವೆ. ಅದರಲ್ಲಿ ಸ್ವಾರ್ಥಕ್ಕಾಗಿ ಹಲವರು ತಮ್ಮ ಶಕ್ತಿ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಹಾಗೆ ಗಡಿಭಾಗದ ರಾಜಕೀಯದಿಂದಲೇ ತಮ್ಮ ಅಸ್ತಿತ್ವ ಕಂಡು ಕೊಳ್ಳುತ್ತಿರುವ ಮ್ ಈ ಎಸ್ ಸಂಘಟನೆ ಮತ್ತೆ ಕುಚೋದ ಪ್ರಾರಂಭಿಸಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ  ಗಡಿ ವಿಷಯವನ್ನ ಕೆದಕಿದ ಎಮ್ ಇ ಎಸ್ ಮುಖಂಡ  ಕಿರಣ ಠಾಕೂರ   ರಾಜ್ಯ ಸರಕಾರದ ಬಗ್ಗೆ ತಾತ್ಸಾರವಾಗಿ ಮಾತನಾಡಿದ್ದಾರೆ.  ಬೆಳಗಾವಿ ಕರ್ನಾಟಕ ಸರಕಾರದ್ದಲ್ಲಾ,  ಬೆಳಗಾವಿ ಕರ್ನಾಟಕಕ್ಕೆ ಪುಕ್ಕಟೆಯಾಗಿ ಸಿಕ್ಕದೆ ಅದಕ್ಕೆ ಇದನ್ನ ಬಳಿಸಿಕೊಳ್ಳುತ್ತಿದ್ದಾರೆ.  ಸುವರ್ಣಸೌಧದಲ್ಲಿ 10 ದಿನಾನೂ ಅಧಿವೇಶನ ನಡೆಯುವದಿಲ್ಲ.  ನಮ್ಮ ತೆರಿಗೆ ಹಣ ವನ್ನ ಕರ್ನಾಟಕ ಸರಕಾರ ಹಾಳು ಮಾಡುತ್ತಿದೆ ಎಂದು ಆರೋಪಿಸಿದ, ಕಿರಣ ಠಾಕೂರ, ಚುನಾವಣಾ ಸಮೀಪಿಸುತ್ತಿದ್ದಂತೆ ಮುಗ್ದ ಮರಾಠೀಗರನ್ನ ಪ್ರಚೋಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ.  ಇವರ ಜೊತೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ. ಮಹರಾಷ್ಟ್ರದಿಂದ ಆಗಮಿಸಿದ ಮುಂಬೈ ಸಂದ ಮತ್ತು ಶಿವಸೇನೆ ಮುಖಂಡ ಸಂಜಯ ರಾವತ, ಬೆಳಗಾವಿ ಖಾಸಗಿ ಕಾರ್ಯಕ್ರಮಕ್ಕೆಮದಲ್ಲಿ ಭಾಗವಹಿಸಿ, ಗಡಿ ವಿಷಯದಲ್ಲಿ ವಿಷ ಬಿತ್ತಿದ ಕೆಲಸ ಮಾಡಿದ್ದಾರೆ.

 

ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್ ಯಾವಾಗ ಗಡಿ ಭಾಗದ ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತದೆಯೋ ಅವಾಗ ಅದರ ಇಫೆಕ್ಟ ಮಹಾರಾಷ್ಟ್ರದಲ್ಲಿ ಆಗುತ್ತದೆ. ಗಲಾಟೆಯಲ್ಲಿ ಇಲ್ಲಿ ಒಂದು ಬಸ್ಸಿಗೆ ಕಲ್ಲು ಬಿದ್ದರೆ ಅಲ್ಲಿ  100 ಕಲ್ಲು ಹೊಡೆಯುವಷ್ಟು ಧೈರ್ಯನಮ್ಮಲ್ಲಿದೆ. ನಾವು ಯಾವದಕ್ಕೂ ಹೆದರುವದಿಲ್ಲ ಚುನಾವಣಾ ನೀತಿ ಸಂಹಿತೆಗೂ ನಾವು ಹೆದರುವದಿಲ್ಲ. ಬಹಳ ಎಂದರೆ ಅವರು ಒಂದು ಕೇಸು ದಾಖಲಿಸಬಹುದು ಅಷ್ಟೇ.  ನಾವು ನಮ್ಮ ಮರಾಠಿ ಭಾಷಿಕರ ಸಲುವಾಗಿ ಇಂತಹ  ಕೇಸನ್ನ ತೆಗೆದು ಕೊಳ್ಳೋದಕ್ಕೆ  ನಾವು ಹೆದರುವದಿಲ್ಲ. ಮಹಾರಾಷ್ಟ್ರದ ಪುನಾ ಮುಂಬೈ ಕೊಲ್ಹಾಪುರಗಳಿಗೆ ನಾವು ಎಷ್ಟು ಮಹತ್ವವನ್ನು ನೀಡುತ್ತೇವೋ ಅಷ್ಟೇ ಮತ್ವವನ್ನ ನಾವು ಬೆಳಗಾವಿಗೆ ನೀಡುತ್ತೇವೆ. ಈ ದೇಶದಲ್ಲಿ ಕಾಶ್ಮೀರ ಸಮಸ್ಯೆ ಕಾವೇರಿ ನದಿ ಸಮಸ್ಯೆಗಳನ್ನ ಸಂವಿಧಾನಿಕವಾಗಿ ಬಗೆಹರಿಸುವದಕ್ಕೆ ಆಗಿಲ್ಲ. ಅಂದ ಮೇಲೆ ನಾವು ಗಡಿ ವಿಷಯ ಸಂವಿಧಾನಿಕವಾಗಿ ಬಗೆ ಹರಿಯುತ್ತದೆ ಎಂದು ಹೇಗೆ ತಿಳಿಯುವದು. ನಾವು ಬೆಳಗಾವಿ ಗಡಿ ಸಮಸ್ಯೆಯನ್ನ  ಹೋರಾಟದಿಂದ ಅಲ್ಲ ಹೊಡೆದಾಟದಿಂದ ಬಗೆಹರಿಸುತ್ತೇವೆ. ನಮ್ಮ ಶಿವಸೇನೆ ಮುಖಂಡರು ನಮಗೆ ಇದನ್ನೇ ಹೇಳಿದ್ದಾರೆ.  ನೀವು ಗಡಿ  ಬಾಂಧವರು ಯಾವಾಗ ಹೇಳುತ್ತಾರೋ ಅವಾಗ ನಾವು ಹೊಡೆದಾಟಕ್ಕೆ ಸಿದ್ದರಿದ್ದೇವೆ ಎಂದು ಹುರುದುಂಬಿಸಿದ್ದಾನೆ.  ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ   ಶಿವಸೇನೆ ಕಣಕ್ಕಿಳಿಯಲಿದೆ ಎಂದು ಶಿವಸೇನೆ ಮುಖಂಡ ಉದ್ದವ ಠಾಕ್ರೆ ಹೇಳಿದ್ದಾರೆ. ಆದ್ರೆ ಎಲ್ಲಿ ಎಮ್ ಈ ಎಸ್  ಸ್ಪರ್ಧಿಸುತ್ತೋ ಅಲ್ಲಿ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಹಾಗೆ ರಾಷ್ಟ್ರೀಯ ಪಕ್ಷಗಳು ಕೂಡ ಎಮ್ ಈ ಎಸ್ ಗೆ ಬೆಂಬಲಿಸಬೇಕು ಎಂದು ಹೇಳಿದ್ದಾರೆ.  ಶೀವಸೇನೆ ಕರ್ನಾಟಕದಲ್ಲಿ 50 ಕ್ಕೂ ಹೆಚ್ಚು ಸ್ಥಾನಗಳಿಗೆ ಹಿಂದುತ್ವ ಅಜಂಡಾ ಹಿಡಿದು ಸ್ಪರ್ಧಿಸಲಿದೆ. ಕರ್ನಾಟಕದ ಹಲವು ಹಿಂದು ಪರ ಸಂಘಟನೆಗಳು ನಮ್ಮೊಂದಿಗಿವೆ. ನಾವು ಒಬ್ಬ ಶಾಸಕನ್ನನ್ನಾದರೂ ಕರ್ನಾಟಕದ ವಿಧಾನ ಸೌಧದಲ್ಲಿ ಕುಡ್ರಿಸ್ತೀವಿ ಎಂದರು.

 

ಪ್ರತ್ಯುತ್ತರ ನೀಡಿ

Please enter your comment!
Please enter your name here