ಟಿಕೆಟ್ ಕೈ ತಪ್ಪಿದ್ದಕ್ಕೆ ರೇವುನಾಯಕ್ ಬೆಳಮಗಿ ಫುಲ್ ಗರಂ!! ಮುಂದೇನ್ಮಾಡ್ತಾರೆ ರೇವುನಾಯಕ್? ಅವರ ಸದ್ಯದ ಡಿಮ್ಯಾಂಡ್ ಏನು ಗೊತ್ತಾ?

ಕಲಬುರಗಿ ಬಿಜೆಪಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈಗಾಗಲೇ ಕಲಬುರಗಿಯ ಉದನೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಈಗಾಗಲೇ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಬಹುತೇಕರು ಬಿಜೆಪಿ ಪಕ್ಷ ಬಿಟ್ಟು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

ಸಭೆಗೂ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಬೆಳಮಗಿ, ನನಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪನವರೇ ನೇರ ಕಾರಣ, ಕೇಂದ್ರ ನಾಯಕರು ಗ್ರಾಮೀಣ ಕ್ಷೇತ್ರಕ್ಕೆ ನನ್ನ ಹೆಸರೇ ಅಂತಿಮಗೊಳಿಸಿದರು ಸಹ, ಅಂದು ನಾನು ಬಿಎಸ್​ವೈ ಜೊತೆ ಕೆಜೆಪಿಗೆ ಹೋಗದಿದ್ದಕ್ಕೆ, ಇಂದು ಯಡಿಯೂರಪ್ಪ ನನ್ನ ವಿರುದ್ದ ಹಗೆತನ ಸಾಧಿಸಿ ಟಿಕೆಟ್ ಕೈತಪ್ಪಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷವನ್ನ ಬೇರುಮಟ್ಟದಿಂದ ಗಟ್ಟಿಗೊಳಿಸಿದ್ದೇನೆ.

ಸಭೆಯಲ್ಲಿ ಬೆಂಬಲಿಗರು ಏನು ಹೇಳುತ್ತಾರೋ ಅದನ್ನ ಕೇಳುತ್ತೇನೆ ಅಂತಾ ಹೇಳಿದರು. ಇನ್ನೂ ಇದೇ ವೇಳೆ ಮಾತನಾಡಿದ ಬೆಳಮಗಿ ಪುತ್ರಿ ಸುನೀತಾ, ನನ್ನ ತಂದೆಯ ಟಿಕೆಟ್ ಕೈತಪ್ಪುವುದಕ್ಕೆ ಯಡಿಯೂರಪ್ಪನೇ ನೇರ ಕಾರಣ, ಬಸವರಾಜ್ ಮತ್ತಿಮೂಡ್​ರಿಂದ ಹಣ ಪಡೆದು ಟಿಕೆಟ್ ಸೆಲ್ ಮಾಡಲಾಗಿದೆ ಅಂತಾ ಆರೋಪಿಸಿದ್ದಾರೆ. ಯಡಿರೂಪ್ಪನವರೇ ನನ್ನ ಜೊತೆ ಖುದ್ದಾಗೊ ಮಾತನಾಡಬೇಕೆಂದು ಬೆಳಮಗಿ ಡಿಮಾಂಡ್ ಮಾಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಒಪ್ತಾರಾ ಕಾದು ನೋಡಬೇಕು.