ಈ ನಾಯಿ ಮಾಲೀಕನ ಕ್ರೌರ್ಯ ನೋಡಿ!! ಇದು ನಾಯಿ ಪಾಡು!!

ನಿಷ್ಠೆ ಅಂದ್ರೆ ನಾಯಿ ಅಂತ ಥಟ್ಟನೆ ಹೇಳ್ತಾರೆ ಆದ್ರೆ ಇಲ್ಲೊಂದು ಕಡೆ ವರ್ಷಗಟ್ಟಲೆ ಸ್ವಾಮಿ ನಿಷ್ಠೆ ಮೆರೆದ ನಾಯಿಗೆ ಮಾಲೀಕನೇ ಕ್ರೂರವಾಗಿ ಶಿಕ್ಷೆ ನೀಡಿದ್ದಾನೆ.

ad


ಹೌದು ಬೈಕ್​​ನಲ್ಲಿ ಕೂತು ಹೋಗುವ ಮಾಲೀಕ ನಾಯಿಯನ್ನು ಹಗ್ಗ ಕಟ್ಟಿ ದರ-ದರ ಎಳೆದುಕೊಂಡು ಹೋಗಿದ್ದು ನಾಯಿ ಪ್ರಾಣ ಉಳಿಸಿಕೊಳ್ಳಲು ಕೂಗುವ ದೃಶ್ಯ ಮನಕಲಕುವಂತಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅನಾರೋಗ್ಯಕ್ಕೆ ತುತ್ತಾದ ಶ್ವಾನವನ್ನು ಅದರ ಮಾಲೀಕ ಬೈಕ್​ಗೆ ಕಟ್ಟಿ ಒಂದು ಕಿಲೋಮೀಟರ್​​ಗಿಂತ ಹೆಚ್ಚು ದೂರ ಎಳೆದೊಯ್ಯುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.

ಇನ್ನು ಕ್ರೂರ ಮಾಲೀಕ ಹೀಗೆ ನಾಯಿಯನ್ನು ಬೈಕ್​ನಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡ ಪ್ರಾಣಿಪ್ರಿಯರು ನಾಯಿ ರಕ್ಷಿಸಿದ್ದಾರೆ. ನಾಯಿ ಮಾಲೀಕ ಅದನ್ನು ಚಿಕಿತ್ಸೆ ಕೊಡಿಸಲು ಹೀಗೆ ಕರೆದೊಯ್ಯತ್ತಿದ್ದ ಎನ್ನಲಾಗಿದ್ದು, ಕ್ರೂರ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.