ಕುಂದಾನಗರಿಯಲ್ಲಿ ಎತ್ತರದ ಧ್ಜಜ ಲೋಕಾರ್ಪಣೆ.!!

ಕುಂದಾನಗರಿ ಬೆಳಗಾವಿಯಲ್ಲಿ ದೇಶದ ಅತೀ ಎತ್ತರದ ರಾಷ್ಟ್ರ ಧ್ವಜ ಲೋಕಾರ್ಪಣೆಗೊಂಡಿದೆ.

 ಬರೋಬ್ಬರಿ 110 ಮೀಟರ್ ಎತ್ತರದ ಧ್ವಜಸ್ತಂಭ ಇದಾಗಿದ್ದು, ಐನೂರು ಕೆಜಿ ಭಾರದ ತ್ರಿವರ್ಣ ಧ್ವಜ ಈ ಸ್ತಂಭದ ಮೇಲೆತ್ತರಕ್ಕೆ ನಗರದ ಕೋಟೆ ಕೆರೆ ಆವರಣದಲ್ಲಿರುವ ಈ ಧ್ವಜವನ್ನು ಸುಮಾರು 1ಕೋಟಿ 62 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಐದು ತಿಂಗಳ ಕಾಲ ಪುಣೆ ಮೂಲದ ಕಾರ್ಮಿಕರು ಈ ಧ್ವಜ ಸ್ಥಂಭವನ್ನ ನಿರ್ಮಾಣ ಮಾಡಿದ್ದಾರೆ.

110 ಮೀಟರ್​​ ಎತ್ತರದ ರಾಷ್ಟ್ರಧ್ವಜ ಸ್ಥಂಭದ ನಿರ್ಮಾಣದಲ್ಲಿ ಧ್ವಜ ಸ್ಥಂಭದ ವ್ಯಾಸ- ಕೆಳಭಾಗ 1.90 ಮೀಟರ್, ಮೇಲ್ಭಾಗ 0.60 ಮೀಟರ್, ಧ್ವಜದ ಅಳತೆ 9600 ಚದರ ಅಡಿ ಇದೆ. ಲೋಕಾರ್ಪಣೆಗೊಂಡ ಧ್ವಜವು ಒಟ್ಟು 500 ಕಿಲೋ ತೂಕವಿದ್ದು, ನಿನ್ನೆ ನಡೆದ ಲೋಕಾರ್ಪಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್​ ಪಾಲ್ಗೊಂಡಿದ್ದರು.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here