ವರುಣನ ಕೃಪೆಗಾಗಿ ಹೂತ ಶವ ಹೊರತೆಗೆದು ಸುಡುವ ವಿಚಿತ್ರ ಆಚರಣೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಅಗ್ರಹಾರ ಗ್ರಾಮದ ಕೊಟ್ರ ಬಸಯ್ಯ ಎಂಬ ವ್ಯಕ್ತಿ ಇತ್ತೀಚಿಗೆ ಮೃತರಾಗಿದ್ರು. ಗ್ರಾಮದ ಜನ್ರು ಬಸಯ್ಯನ ಶವ ಹೊರ ತೆಗೆದು ಸುಡಲು ಅವಕಾಶ ನೀಡಿ ಎಂದು ಕುಟುಂಬಕ್ಕೆ ವಿನಂತಿಸಿದ್ರು. ಅದ್ರೆ ಕುಟುಂಬಸ್ಥರು ಇದಕ್ಕೆ ಅನುಮತಿ ನೀಡದಿದಕ್ಕೆ. ಮನೆ ಸುತ್ತುವರಿದು ಶವವನ್ನು ಹೊರ ತೆಗೆದಿದ್ದಾರೆ. ಇನ್ನು ಕುಟುಂಬದವ್ರು ಪೊಲೀಸ್ರಿಗೆ ಫೋನ್​ ಮೂಲಕ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ಪೊಲೀಸ್ರ ಮೇಲೆ ಶವ ತೆಗೆಯಲು ಬಂದಿದ್ದ ಗುಂಪು ಕಲ್ಲು ತೂರಿ ಪರಾರಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 13 ಜನರ ವಿರುದ್ಧ ಖಾನಾಹೊಸಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
===========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here