ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈಗ 25ವರ್ಷದ ಸಂಭ್ರಮವಾಗಿದ್ದು, ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ದೇಸಿ ಚಿಂತನೆ, ಕನ್ನಡ ಹಾಗೂ ಕನ್ನಡ ನಾಡಿನ ಚರಿತ್ರೆಗೆ ಸಂಬಂಧಿಸಿ ಅಧ್ಯಯನ ಕೈಗೊಳ್ಳಲಿರುವ ಏಕೈಕ ವಿಶ್ವವಿದ್ಯಾಲಯದಲ್ಲಿ ವಿವಿಧ ಪುಸ್ತಕಗಳನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು. ಜೊತೆಗೆ ಕಳೆದ 25 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಕುಲಪತಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯ್ತು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಉಮಾಶ್ರೀ, ಸಂತೋಷ್ ಲಾಡ್​, ಹೆಚ್​ ಆಂಜನೇಯ, ತನ್ವೀರ್​ ಸೇಠ್​ ಹಾಗೂ ವಿವಿಯ ಕುಲಪತಿ ಮಲ್ಲಿಕಾ ಘಂಟಿ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ರು.
=========
ಬೈಟ್​ : ಸಿದ್ದರಾಮಯ್ಯ, ಸಿಎಂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here