ರಾಹುಲ್​ಗೆ ಬಂಗಾರ ಲೇಪಿತ ವಾಲ್ಮೀಕಿ ಪ್ರತಿಮೆ ಕೊಡುಗೆಯಾಗಿ ನೀಡಿದ ಶಾಸಕ ನಾಗೇಂದ್ರ!!

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಈಗಾಗಲೇ ರಾಹುಲ್ ಗಾಂಧಿ ದೆಹಲಿಯಿಂದ ಹೆಲಿಕ್ಯಾಪ್ಟರ್ ಮೂಲಕ ಹೊಸಪೇಟೆಗೆ ಬಂದಿಳಿದಿದ್ದಾರೆ.

ಈ ಮಧ್ಯೆ ರಾಹುಲ್​ ಗಾಂಧಿಯನ್ನು ಇಂಪ್ರೆಸ್​ ಮಾಡಲು ಕೂಡ್ಲಿಗಿ ಶಾಸಕ ನರೇಂದ್ರ ಸಖತ್ತಾಗಿಯೇ ಸಜ್ಜಾಗಿದ್ದು, ಇದಕ್ಕಾಗಿ ಬಂಗಾರ ಲೇಪಿತ ಬೆಳ್ಳಿಯ ವಾಲ್ಮೀಕಿ ಪ್ರತಿಮೆ ಮಾಡಿಸಿದ್ದಾರೆ. ನೂತನವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಕೂಡ್ಲಿಗಿ ಶಾಸಕ, ಬಿ.ನಾಗೇಂದ್ರ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಡಲು ಬಂಗಾರದ ಲೇಪನ ಹೊಂದಿರುವ 1.2ಅಡಿ ಎತ್ತರವಿರುವ ಬೆಳ್ಳಿಯ ವಾಲ್ಮೀಕಿ ಪುತ್ಥಳಿ ನಿರ್ಮಿಸಿದ್ದಾರೆ.

 

ಈ ಬೆಳ್ಳಿ ವಾಲ್ಮೀಕಿ ಮೂರ್ತಿಯನ್ನು ನಾಯಕನಹಟ್ಟಿಯ ಹೆಸರಾಂತ ಚಿತ್ರಕಾರ ಸಿ.ಎಸ್.ತಿಪ್ಪೆಸ್ವಾಮಿ ನಿರ್ಮಿಸಿದ್ದಾರೆ. ಹೊಸಪೇಟೆಯ ಸಮಾರಂಭದಲ್ಲಿ ಪಾಲ್ಗೊಂಡು ಉತ್ತರ ಕರ್ನಾಟಕದಾದ್ಯಂತ ಚುನಾವಣೆ ಪ್ರಚಾರದ ರಣಕಹಳೆ ಮೂಡಿಸುತ್ತಿರುವ ರಾಹುಲ್​ ಗೌರವಿಸಲು ಈ ವಿಶೇಷ ಮೂರ್ತಿ ಸಿದ್ದವಾಗಿದೆ. ನಾಗೇಂದ್ರ ಅವರೇ ಸ್ವತಃ ಆಸಕ್ತಿ ವಹಿಸಿ ಈ ಮೂರ್ತಿ ಆಯ್ಕೆ ಮಾಡಿದ್ದು, ರಾಮಾಯಣ ಕೃರ್ತ ವಾಲ್ಮೀಕ್​ ಪ್ರತಿಮೆ ಕಾಂಗ್ರೆಸ್​ ಯುವರಾಜನ ಕೈ ಸೇರಲಿದೆ.