ವಿದ್ಯಾರ್ಥಿನಿ ಮೇಲೆ ೧೦ ದಿನಗಳಿಂದ ಸಾಮೂಹಿಕ ಅತ್ಯಾಚಾರ- ಬೆಚ್ಚಿಬಿದ್ದ ಸಿಲಿಕಾನ್ ಸಿಟಿ!

ಸಿಲಿಕಾನ ಸಿಟಿ ಬೆಂಗಳೂರು ಯುವತಿಯರಿಗೆ,ಮಹಿಳೆಯರಿಗೆ ಮತ್ತು ವಿದ್ಯಾರ್ಥೀನಿಯರಿಗೆ ಸೇಫಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು, ಯುವತಿಯೊಬ್ಬಳನ್ನು ಪಾರ್ಟಿ ನೆಪದಲ್ಲಿ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

 

ಬೆಂಗಳೂರಿನ ಕಾಡುಗೋಡಿಯ ಕ್ಲಾಸಿಕ್​ ಇನ್​ ಲಾಡ್ಜ್​ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಹಪಾಠಿಗಳೇ ಕೃತ್ಯ ಎಸಗಿದ್ದಾರೆ. ಪಾರ್ಟಿ ನೆಪದಲ್ಲಿ ಕಾಡುಗೋಡಿಯ ಹೊಟೇಲ್​​ಗೆ ಕರೆಸಿಕೊಂಡು ಆಕೆಯ ಸಹಪಾಠಿಗಳಾದ ಉಡುಪಿಯ ರಾಘವೇಂದ್ರ. ವೆಸ್ಟ್ ಬೆಂಗಾಲದ ಮನೋರಾಜನ್ ಪಂಡಿತ್. ದಾವಣಗೆರೆಯ ಸಾಗರ್. ಮೈಸೂರಿನ ಮಂಜುರಾಜ್ ಆಕೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು.

 

ಲಾಡ್ಜ್​ನಲ್ಲೇ 10 ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದು, ಘಟನೆ ಬೆಳಕಿಗೆ ಬರುತ್ತಿದಂತೆ ಲಾಡ್ಜ್​ ಮಾಲೀಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟಿನಲ್ಲಿ ನಗರದಲ್ಲಿ ಮತ್ತೆ-ಮತ್ತೆ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.