ಮತ್ತೆ ಹೊತ್ತಿಉರಿಯಿತು ಬೆಳ್ಳಂದೂರು ಕೆರೆ

ರಾಷ್ಟ್ರಮಟ್ಟದಲ್ಲಿ ಸಿಲಿಕಾನ ಸಿಟಿಯ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಮತ್ತೊಮ್ಮೆ ಸುದ್ದಿಯಾಗಿದ್ದು, ನಿನ್ನೆಯಿಂದಲೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಉರಿಯುತ್ತಿದೆ.

ad


ಕಳೆದ 24 ಗಂಟೆಯಿಂದಲೂ ಉರಿಯುತ್ತಿರುವ ಬೆಂಕಿ ಆರ್ಮಿ ಪ್ರದೇಶಕ್ಕೂ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಆರ್ಮಿಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳ್ಳಂದೂರು ಕೆರೆಯ ಕಲುಷಿತ ನೀರಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಪಕ್ಕದ ಕೆರೆಯ ಹುಲ್ಲಿಗೂ ವ್ಯಾಪಿಸಿದೆ. ನಿನ್ನೆ ಮಧ್ಯಾಹ್ನದಿಂದಲೂ ಕಾರ್ಯಾಚರಣೆ ಆರಂಭವಾಗಿದೆ. ಒಂದು ಕಡೆ ಬೆಂಕಿ ಆರಿಸಿದರೇ ಇನ್ನೊಂದು ಕಡೆ ಬೆಂಕಿ ವ್ಯಾಪಿಸುತ್ತಿದ್ದು, ಫೈರ್​ ರ್ಯಾಕ್​ ಬಳಸಿ ಬೆಂಕಿ ನಂದಿಸುವ ಕಾರ್ಯ ನಡಿತಾ ಇದೆ. ಇನ್ನು ಬೆಂಕಿ ನಂದಿಸಲು ಕೆರೆಯ ನೀರನ್ನೇ ಬಳಸಿಕೊಳ್ಳಲಾಗುತ್ತಿದೆ.

ಇನ್ನು ಆರ್ಮಿ ಪ್ರದೇಶಕ್ಕೆ ವ್ಯಾಪಿಸಿದ ಬೆಂಕಿಯನ್ನು ನಂದಿಸಲು ಸೈನಿಕರು ಪರದಾಡಿದ್ದರು. ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಕೆಲವರಿಗೆ ಹಾವಿನ ಕಾಟ ಕೂಡ ಎದುರಾಗಿತ್ತು. ಇಬ್ಬರಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ನೀಡಲಾಗಿದೆ. ಇನ್ನು ಹಸಿರು ನ್ಯಾಯಾಧೀಕರಣದ ಆದೇಶದ ಬಳಿಕವೂ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ಮುಂದುವರೆದಿದ್ದು, ಇದಕ್ಕೆ ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿಯೇ ಸಾಕ್ಷಿಯಾಗಿದೆ. ಬಿಬಿಎಂಪಿ ಹಾಗೂ ಸರ್ಕಾರ ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆ ನೀಗಿಸಲು ತಾತ್ಕಾಲಿಕ ಪ್ರಯತ್ನ ನಡೆಸಿತ್ತಾದರೂ ಅದು ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತೆ ನೊರೆ ಬೆಂಕಿ ಸಮಸ್ಯೆ ಎದುರಾಗಿತ್ತು. ಮತ್ತೆ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.