ದಚ್ಚು ಹುಟ್ಟುಹಬ್ಬಕ್ಕೆ ಈಗಲೇ ಸಿಂಗಾರಗೊಂಡಿದೆ ತೂಗುದೀಪ ನಿವಾಸ!

Bengaluru: Actor Darshan Residence Decorated for his Birthday
Bengaluru: Actor Darshan Residence Decorated for his Birthday

ನಟ-ನಟಿಯರ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬದ ದಿನ ಆಳೆತ್ತರದ ಕಟೌಟ್​​ ಬೀಳೋದು ಸಾಮಾನ್ಯವಾದ ಸಂಗತಿ.

 

ಆದರೇ ಸ್ಯಾಂಡಲ್​ವುಡ್​​ನ ಸಾರಥಿ, ಬಾಕ್ಸಾಪೀಸ್​ ಸುಲ್ತಾನ್​ ದರ್ಶನ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇರುವಾಗಲೇ ಅವರ ನಿವಾಸದ ಎದುರು ಆಳೆತ್ತರದ ಕಟೌಟ್​ ಬಿದ್ದಿರೋದು ದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ಹೌದು ತೂಗುದೀಪ ದರ್ಶನ್​​ಗೆ ಸ್ಯಾಂಡಲ್​ವುಡ್​​ನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪ್ರತಿವರ್ಷವೂ ದರ್ಶನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರ್ತಿದ್ದಾರೆ.

 

ಈ ಭಾರಿ ಕೂಡ ಡಿ ಫ್ಯಾನ್ಸ್​ ಉತ್ಸವ ಹೆಸರಿನಲ್ಲಿ ಕಳೆದ 5 ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹೊಸ ಹಂಗಾಮಾ ಸೃಷ್ಟಿಸಿದ್ದಾರೆ. ಈ ಮಧ್ಯೆ ಈಗಾಗಲೇ ದರ್ಶನ ಮನೆ ಮುಂದೇ ಆಳೆತ್ತರದ ಕಟೌಟ್​ ನಿಲ್ಲಿಸಲಾಗಿದ್ದು, ಹೂವಿನಿಂದ ಡಿ ಬಾಸ್​ ಎಂದು ರಂಗೋಲಿ ಬರೆಯಲಾಗಿದೆ.
ನಿನ್ನೆ ತಡರಾತ್ರಿ ಅಭಿಮಾನಿಗಳು ಕಟೌಟ್​ ನಿಲ್ಲಿಸಿದ್ದು, ದರ್ಶನ ಕುರುಕ್ಷೇತ್ರದ ದುರ್ಯೋಧನ್​ ಪಾತ್ರದ ಕಟೌಟ್​ ನಿಲ್ಲಿಸಲಾಗಿದೆ. ಜೊತೆಗೆ ಹಾಲಿನ ಅಭಿಷೇಕ ಮಾಡಿದ್ದು, ಹೂವಿನ ಹಾರ ಹಾಕಿ ಶೃಂಗರಿಸಲಾಗಿದೆ. ಇಂದಿನಿಂದಲೇ ಹುಟ್ಟುಹಬ್ಬದ ಆಚರಣೆ ವಿದ್ಯುಕ್ತವಾಗಿ ಆರಂಭವಾದಂತಾಗಿದೆ.