ಸೈಟ್​ ಪಡೆಯಲು ಹಿರಿಯ ನಟನ ಪರದಾಟ

ಕನ್ನಡದ ಹಿರಿಯ ಖಳನಟ ಸತ್ಯಜಿತ್ ಅನಾರೋಗ್ಯದಿಂದ ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ.

ಮಧುಮೇಹದಿಂದ ಈಗಾಗಲೇ ಕಾಲು ಕಳೆದುಕೊಂಡಿರುವ ಸತ್ಯಜಿತ್, ಇದೀಗ ತಮ್ಮದೇ ಆದ ಒಂದು ನೆಲೆಗಾಗಿ ಪರದಾಡುತ್ತಿದ್ದಾರೆ. ಹೌದು ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದಿದ್ದರೂ ಸತ್ಯಜಿತ್ ಇನ್ನು ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ ಇದೀಗ ಬಿಡಿಎ ಸೈಟ್​ ಪಡೆಯಲು ಮುಂಧಾಗಿರುವ ಸತ್ಯಜಿತ್ ಇಂದು ಬಿಡಿಎ ಕಚೇರಿಗೆ ಬಂದು ಅಧಿಕಾರಿಗಳೇ ಸಿಗದೇ ಪರದಾಡಿದರು. ಖಳನಟ ಸತ್ಯಜಿತ ಬಿಡಿಎ ಸೈಟ್ ಗಾಗಿ ಇಂದು ಬಿಡಿಎ ಆಯುಕ್ತರನ್ನು ಭೇಟಿ ಮಾಡಲು ಆಗಮಿಸಿದ್ರು. ಆದರೇ ಕಚೇರಿಯಲ್ಲಿ ಅಧಿಕಾರಿಗಳೇ ಇರಲಿಲ್ಲ.

 

ಹೀಗಾಗಿ ಮಧುಮೇಹದಿಂದ ಕಾಲು ಕಳೆದುಕೊಂಡು ಕಷ್ಟ ಪಡುತ್ತಿರುವ ಸತ್ಯಜಿತ್ ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳಾಗಿ ತುಂಬ ಹೊತ್ತು ಕಾದು ಬರಿಗೈಯಲ್ಲಿ ವಾಪಸ್ಸಾದರು. ಈಗಾಗಲೇ ಸತ್ಯಜಿತ್ ತಮಗೆ ವಾಸಕ್ಕೆ ಮನೆಕಟ್ಟಲು ಒಂದು ಸೈಟ್ ಒದಗಿಸಿಕೊಡುವಂತೆ ಸಿಎಂ ಉಪಕಾರ್ಯದರ್ಶಿಯನ್ನು ಭೇಟಿ ಮಾಡಿದ್ದರು. ಅವರು ಸತ್ಯಜಿತ್ ಅವರಿಗೆ ಬಿಡಿಎ ಕಚೇರಿಗೆ ತೆರಳುವಂತೆ ಸೂಚಿಸಿದ್ದರು. ಆದರೆ ಸತ್ಯಜಿತ್ ಬಿಡಿಎ ಕಚೇರಿಗೆ ಬಂದರೇ ಅಧಿಕಾರಿಗಳೇ ಸಿಗದೆ ಪರದಾಡುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ.