ನಮ್ಮ ಮೆಟ್ರೋದಲ್ಲಿ ರಾಗಾ ಪ್ರವಾಸ..!!

ರಾಜ್ಯ ಚುನಾವಣೆ ವೇಳೆ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮುಂಜಾನೆಯಿಂದಲೇ ನಗರದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ad


ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮಧ್ಯಾಹ್ನ ವಿಧಾನಸೌಧದಿಂದ ಎಂ.ಜೆ ರಸ್ತೆವರೆಗೆ ಮೆಟ್ರೋದಲ್ಲಿ ಸಂಚರಿಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಸೇರಿದಂತೆ ಹಲವರು ಸಾಥ್​ ನೀಡಿದ್ರು. ನಂತ್ರ ಚರ್ಚ್​ಸ್ಟ್ರೀಟ್​ ಬಳಿಯ ಬುಕ್​ ವಾರ್ನ್​ ಸ್ಟೋರ್​ಗೆ ತೆರಳಿ ಬುಕ್​ ಖರೀದಿಸಿದ್ರು.

ಇನ್ನು ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ 3 ಬುಕ್​ಗಳನ್ನು ಗಿಫ್ಟ್​ ಆಗಿ ನೀಡಿದರು. ಆ ಬಳಿ ರಾಹುಲ್ ಗಾಂಧಿ ಇಂದು ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಗಾಂಧಿ ನಗರದಲ್ಲಿ ನಡೆದ ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.