ಆಟೋಚಾಲಕನ ಸಹಾಯಕ್ಕೆ ಹೋದ ತಾಯಿ-ಮಗಳ ಕತೆ ಏನಾಯ್ತು? ನೀವೆ ನೋಡಿ!!

ಬೆಂಗಳೂರಿನಲ್ಲಿ ಜನರು ಎಷ್ಟೇ ಹುಶಾರಾಗಿದ್ರೂ ವಂಚಿಸೋರು ಮತ್ತಷ್ಟು ಹೈಟೆಕ್​ ಆಗಿ ವಂಚಿಸ್ತಾರೆ. ಇದಕ್ಕೆ ಸಾಕ್ಷಿ ಈ ಆಟೋ ಚಾಲಕ. ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗಲು ಆಟೋ ಹತ್ತಿದ ತಾಯಿ-ಮಗಳನ್ನು ಚಾಲಕ ಸಿನಿಮಿಯ ರೀತಿಯಲ್ಲಿ ವಂಚಿಸಿ ಪರಾರಿಯಾಗಿದ್ದಾನೆ.

ರಾಜಾಜಿನಗರದ ಡಿ ಮಾರ್ಟ್​​ ಬಳಿ ಶಾಪಿಂಗ್​​ ಗೆ ತೆರಳಿದ್ದ ತಾಯಿ-ಮಗಳು ಅಂದಾಜು 8 ಸಾವಿರ ರೂಪಾಯಿ ಮೌಲ್ಯದ ವಸ್ತು ಖರೀದಿಸಿದ್ದರು. ಬಳಿಕ ಮನೆಗೆ ತೆರಳಲು ಆಟೋವೊಂದನ್ನು ಹತ್ತಿದ್ದರು. ಆದರೇ ಇವರು ಖರೀದಿಸಿದ್ದ ವಸ್ತುವಿನ ಮೇಲೆ ಕಣ್ಣಿಟ್ಟಿದ್ದ ಆಟೋ ಚಾಲಕ ತನ್ನ ಆಟೋ ಹಾಳಾಗಿದೆ. ಸ್ವಲ್ಪ ದೂರ ತಳ್ಳಿ. ಅಟೋ ಸ್ಟಾರ್ಟ್​​​ ಆದ ಕೂಡಲೇ ಕರೆದೊಯ್ಯತ್ತೇನೆ ಎಂದಿದ್ದಾನೆ. ಇದನ್ನು ನಂಬಿದ ತಾಯಿ ಮತ್ತು ಮಗಳು ಅಟೋವನ್ನು ನಿಧಾನಕ್ಕೆ ತಳ್ಳಿದ್ದಾರೆ. ಸ್ವಲ್ಪ ದೂರ ಹೀಗೆ ನಾಟಕವಾಡಿಕೊಂಡು ಹೋದ ಆಟೋದವನು ಸೂಕ್ತ ಸಮಯ ನೋಡಿಕೊಂಡು ಆಟೋವನ್ನು ಜೋರಾಗಿ ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ತಾಯಿ-ಮಗಳು ಕಂಗಾಲಾಗಿದ್ದಾರೆ. ಈ ದೃಶ್ಯ ರಸ್ತೆ ಬದಿಯಲ್ಲೇ ಇದ್ದ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ತಾಯಿ-ಮಗಳು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಆಟೋ ಚಾಲಕನ ನೆರವಿಗೆ ಹೋದ ತಪ್ಪಿಗೆ ತಾಯಿ-ಮಗಳು ಮೋಸ ಹೋಗಿದ್ದು, ನೀವು ಆಟೋ ಹತ್ತುವ ಮುನ್ನ ಎಚ್ಚರವಾಗಿರಿ.