ಬಿಗ್ ಬಾಸ್ ಮನೆಗೆ ಬೆಂಕಿ ! ಹೊತ್ತಿ ಉರಿದ ಇನ್ನೋವೆಟಿವ್ ಫಿಲ್ಮ್ ಸಿಟಿ !!

Bengaluru: Bigg Boss set in the Innovative Film city burnt down
Bengaluru: Bigg Boss set in the Innovative Film city burnt down

ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಮನೆಯಾಗಿದ್ದ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ತಡರಾತ್ರಿ ಅಗ್ನಿಆಕಸ್ಮಿಕ ನಡೆದಿದ್ದು, ಮೇಣದ ಮ್ಯೂಸಿಯಂ ಸೇರಿದಂತೆ ಹಲವು ಸೆಟ್​ಗಳು ಬೆಂಕಿಗೆ ಆಹತಿಯಾಗಿದೆ.

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್ ನಿಂದ ಮ್ಯೂಸಿಯಂ ಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ.
ರಾಮನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್​ ಫಿಲಂ ಸಿಟಿಯಲ್ಲಿ ಘಟನೆ ನಡೆದಿದ್ದು, ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ 6 ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದೆ.
ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಶಾರ್ಟ್​ಸರ್ಕೂಟ್​ ಆಗಿದ್ದರಿಂದ ಮೇಣದ ಮ್ಯೂಸಿಯಂಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಅಲ್ಲಿ ಹಾಕಲಾಗಿದ್ದ ಇತರ ಸೆಟ್​ಗಳಿಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿ ಕೆನ್ನಾಲಿಗೆ ಆಕಾಶದೆತ್ತರಕ್ಕೆ ವ್ಯಾಪಿಸಿದೆ. ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.