ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಬರ್ಭರ ಹತ್ಯೆ- ದುಷ್ಕರ್ಮಿಗಳಿಗೆ ಬಲಿಯಾದ ಬಿಜೆಪಿ ಕಾರ್ಪೋರೇಟರ್​ ಪತಿ!!

ರಾಜ್ಯದಲ್ಲಿ ಮತ್ತೆ ಬಿಜೆಪಿ ಕಾರ್ಯಕರ್ತರ ಹತ್ಯಾ ಸರಣಿ ಮುಂದುವರೆದಿದ್ದು, ಬೆಂಗಳೂರಿನ ಛಲವಾದಿ ಪಾಳ್ಯದ ಬಿಜೆಪಿ ಕಾರ್ಪೋರೇಟರ್​ ರೇಖಾ ಕದಿರೇಶ್​ ಪತಿ ಕದಿರೇಶ್​ಯನ್ನು ನಾಲ್ವರು ದುಷ್ಕರ್ಮಿಗಳು ಬರ್ಭರವಾಗಿ ಅಟ್ಟಾಡಿಸಿಕೊಂದಿದ್ದಾರೆ.

ಛಲವಾದಿ ಪಾಳ್ಯದ ಮುನೇಶ್ವರ್ ದೇವಾಲಯದ ಬಳಿ ಘಟನೆ ನಡೆದಿದ್ದು, ಬೆಂಗಳೂರು ಸೇರಿದಂತೆ ರಾಜ್ಯವೇ ಬೆಚ್ಚಿ ಬಿದ್ದಿದೆ. ಕಾರ್ಪೋರೇಟರ್​​ ಪತಿಗೆ ರಕ್ಷಣೆ ಇಲ್ಲದಿದ್ದರೇ ಜನಸಾಮಾನ್ಯರು ಬದುಕೋದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಛಲವಾದಿ ಪಾಳ್ಯದ ಬಿಜೆಪಿ ಕಾರ್ಪೋರೇಟರ್​ ಆಗಿರುವ ರೇಖಾ ಕದಿರೇಶ್​​ ಪತಿಯಾಗಿರುವ ಕದಿರೇಶ್ ಇಂದು ಮಧ್ಯಾಹ್ನದ ವೇಳೆ ತಾವು ಅಂಜನಪ್ಪಗಾರ್ಡನ್​​​ ಬಳಿ ತಾವು ನಿರ್ಮಿಸುತ್ತಿರುವ ಮುನೇಶ್ವರ್ ದೇವಾಲಯದ ಪರಿಶೀಲನೆಗೆ ತೆರಳಿದ್ದ ವೇಳೆ ಬೈಕ್​ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಕದಿರೇಶ್​ ಹತ್ಯೆಗೈಯ್ದಿದ್ದಾರೆ. ತೀವ್ರರಕ್ತಸ್ರಾವದಿಂದ ಬಳಲುತ್ತಿದ್ದ ಕದಿರೇಶ್​ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಬಿಜೆಪಿ ಕಾರ್ಯಕರ್ತನಾಗಿರುವ ಕದಿರೇಶ್​, ಸಂಸದ ಪಿ.ಸಿ.ಮೋಹನ್​ ಗೆ ಆಪ್ತರಾಗಿದ್ದರು. ಕದಿರೇಶ್ ಪತ್ನಿ ರೇಖಾ ಎರಡನೇ ಭಾರಿ ಬಿಜೆಪಿ ಕಾರ್ಪೋರೇಟರ್​ ಆಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕದಿರೇಶ್​ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಸಿಪಿ ಅನುಚೇತ ಭೇಟಿ ನೀಡಿದ್ದು, ಹಳೆ ದ್ವೇಷದಿಂದ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕದಿರೇಶ್​ ಹತ್ಯೆ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ಸಾವಿರಾರು ಜನರು ಭೇಟಿ ನೀಡಿದ್ದು, ಕದಿರೇಶ್​ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಶವಾಗಾರಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಕದಿರೇಶ್​ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಟಿವಿನ್ಯೂಸ್​ ಜೊತೆ ಮಾತನಾಡಿದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ್​ ರೆಡ್ಡಿ, ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರೋದಕ್ಕೆ ಸಾಕ್ಷಿ. ನಗರದಲ್ಲಿ ಜನರು ಭಯದಿಂದ ಬದುಕುವಂತಾಗಿದೆ ಎಂದರು.