ಮೋದಿಯವರ ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸು ನನಸು ಮಾಡುತ್ತೇವೆ- ಮೋದಿಯವರಿಗೆ ಬಿಎಸ್​ವೈ ವಾಗ್ದಾನ

ಪ್ರಧಾನಿ ನರೇಂದ್ರ ಮೋದಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಕನಸನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಹೀಗೆಂದು ವಾಗ್ದಾನ ಮಾಡಿದ ಬಿಎಸ್​ವೈ ಪ್ರಧಾನಿಯವರ ಅಭಿವೃದ್ಧಿ ಕಾರ್ಯ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ ವೈಫಲ್ಯ ನಮಗೆ ವರವಾಗಲಿದೆ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಿಲಿಕಾನ ಸಿಟಿಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಎಸ್​ವೈ, ಪರಿವರ್ತನಾ ರ್ಯಾಲಿಯಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ 224 ಕ್ಷೇತ್ರಗಳಲ್ಲಿ 2 ಕೋಟಿಗೂ ಅಧಿಕ ಜನರನ್ನು ಭೇಟಿ ಮಾಡಿದ್ದೇನೆ.

ಪ್ರತಿಯೊಂದು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಈ ದೇಶಕಂಡ ಅತ್ಯಂತ ಭ್ರಷ್ಟ ಸಿಎಂ ಸಿದ್ದರಾಮಯ್ಯ. ಹೀಗಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಉದ್ದೇಶ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಸ್ವಚ್ಛ,ದಕ್ಷ ಆಡಳಿತ ನಮ್ಮ ಕನಸು. ನಾವು ಅಧಿಕಾರಕ್ಕೆ ಬಂದರೇ ರಾಜ್ಯದ ನೀರಾವರಿ ಸಮಸ್ಯೆ ಬಗೆಹರಿಸುವುದಕ್ಕೆ ಲಕ್ಷ ಕೋಟಿ ಮೀಸಲಿರಿಸುತ್ತೇನೆ. ಎಲ್ಲೆಡೆ ಜನರು ಬಿಜೆಪಿಯತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಕನಸು ಎಂದು ಬಿಎಸ್​ವೈ ಹೇಳಿದರು. ಭಾಷಣ ಮಧ್ಯದಲ್ಲೇ ಮೋದಿಯವರಿಗೆ ಮನವರಿಕೆಯಾಗುವಂತೆ ಬಿಎಸ್​ವೈ ಹಿಂದಿಯಲ್ಲೇ ಕಾಂಗ್ರೆಸ್ ಮುಕ್ತ ಕರ್ನಾಟಕದ ಭರವಸೆ ನೀಡಿದ್ದು ವಿಶೇಷವಾಗಿತ್ತು.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here