ಒಂಟಿ ಮಹಿಳೆ ಮೇಲೆ ಚಾಲಕ-ನಿರ್ವಾಹಕರ ದರ್ಪ!!

Bengaluru: Bus Conductor and driver Commotion on Woman At Night.
Bengaluru: Bus Conductor and driver Commotion on Woman At Night.

ಬೆಂಗಳೂರಿನಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಪ್ರತಿನಿತ್ಯ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ನಿನ್ನೆ ಕೂಡ ತಡ ರಾತ್ರಿ ಪ್ರಯಾಣ ಮಾಡುತ್ತಿದ್ದ ಒಂಟಿ ಮಹಿಳೆ ಮೇಲೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ನ ಚಾಲಕ ನಿರ್ವಾಹಕರು ದಬ್ಬಾಳಿಕೆ ಮಾಡಿರುವ ಘಟನೆ ನಡೆದಿದೆ.

Bengaluru: Bus Conductor and driver Commotion on Woman At Night.
Bengaluru: Bus Conductor and driver Commotion on Woman At Night.

ಅಹಮದಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾ. ಪಟೇಲ್ ಎಂಬ ಮಹಿಳೆ ತಮಿಳುನಾಡಿನ ವೆಲ್ಲೂರಿಗೆ ಹೋಗುವರಿದ್ದರು. ಹೀಗಾಗಿ ರಾತ್ರಿ ೧ ಗಂಟೆ ವೇಳೆ ಶಾಂತಿನಗರದ ಬಸ್ ನಿಲ್ದಾಣದಲ್ಲಿ ಚೆನ್ನೈಗೆ ತೆರಳಲಿರುವ ತಮಿಳುನಾಡು ಸಾರಿಗೆ ಬಸ್ ಹತ್ತಿದ್ದರು. ಆದರೆ ೧೫ ನಿಮಿಷದಲ್ಲಿ ಹೊರಡುತ್ತೇವೆ ಎಂದಿದ್ದ ಬಸ್​ 45 ನಿಮಿಷವಾದರೂ ಬಸ್ ನಿಲ್ದಾಣ ಬಿಟ್ಟಿರಲಿಲ್ಲ.

Bengaluru: Bus Conductor and driver Commotion on Woman At Night.
Bengaluru: Bus Conductor and driver Commotion on Woman At Night.

ಇದನ್ನು ಡಾ.ಪಟೇಲ್ ಪ್ರಶ್ನಿಸಿದ್ದಕ್ಕೆ ಕೆರಳಿದ ಬಸ್ ಚಾಲಕ ಹಾಗೂ ನಿರ್ವಾಹಕ ಡಾ ಪಟೇಲ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಡಾ.ಪಟೇಲ್​ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದ್ದು, ಮಹಿಳೆ ಜೊತೆ ಉದ್ಧಟತನದಿಂದ ವರ್ತಿಸಿದ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Watch Here: https://youtu.be/MhflXvWT0dk

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here