ಬೆಂಗಳೂರಿಗರೇ ಎಚ್ಚರ !! ಮತ್ತೆ ಬಂದಿದ್ದಾನೆ ಸೈಕೋಪಾತ್ !! ಹುಡುಗಿಯರೇ ಟಾರ್ಗೆಟ್ !!

ಬೆಂಗಳೂರಲ್ಲಿ ಮತ್ತೊಬ್ಬ ಸೈಕೋ ಪಾತ್ ಅಡ್ಡಾಡುತ್ತಿರುವ ಪ್ರಕರಣ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಜನವರಿ 10 ರಂದು ಮಧ್ಯರಾತ್ರಿ 2 ಗಂಟೆಗೆ ಮೆಟ್ರೋ ರೈಲು ಚಾಲಕಿಯರ ಕ್ವಾಟ್ರಸ್ ಗೆ ನುಗ್ಗಿದ್ದ ಸೈಕೋಪಾತ್ ಚೂರಿ ಹಿಡಿದುಕೊಂಡು ಯುವತಿಯರ ಒಣಹಾಕಿದ್ದ ಒಳ ಉಡುಪುಗಳನ್ನು ಮೂಸಿ ನೋಡುತ್ತಿದ್ದ ಎಂದು ಪ್ರಕರಣ ದಾಖಲಾಗಿದೆ. ಇದು ಬೆಂಗಳೂರಿನ ಮಹಿಳೆಯರ ಭದ್ರತೆಯ ಬಗ್ಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ad


ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಬಿಎಂಆರ್ ಸಿಎಲ್ ವಸತಿ ಗೃಹದಲ್ಲಿ ಮೆಟ್ರೋ ರೈಲಿನ ಚಾಲಕಿಯರು ವಾಸವಿದ್ದಾರೆ. ಜನವರಿ 10 ರಂದು ರಾತ್ರಿ ಮೆಟ್ರೋ ಚಾಲಕಿಯರು ನಿದ್ರೆ ಮಾಡುತ್ತಿದ್ದಾಗ ಸೈಕೋ ಪಾತ್ ಒಬ್ಬ ವಸತಿಗೃಹಕ್ಕೆ ನುಗ್ಗಿದ್ದಾನೆ. ಕತ್ತಲ ಕೋಣೆಯಲ್ಲಿ ಚಾಕು ಹಿಡಿದು ದೆವ್ವದಂತೆ ನಿಂತಿದ್ದ ವ್ಯಕ್ತಿಯನ್ನು ಯುವತಿಯೊಬ್ಬಳು ಗುರುತಿಸಿದ್ದಾಳೆ. ಯುವತಿಯರಲ್ಲಿ ಒಬ್ಬರಿಗೆ ಎಚ್ಚರಗೊಂಡು ಸೈಕೋ ನನ್ನ ನೋಡಿ ಕೂಗಾಡಿಕೊಂಡಿದ್ಲು. ನಂತರ ಯಾರು ನೀನು..? ಎಲ್ಲಿಂದ ಬಂದಿದ್ದು..? ಎಂದು ಆತನನ್ನು ಯುವತಿ ಪ್ರಶ್ನಿಸಿದ್ದಾಳೆ. ಮೊದಲು ನಾನು ಇದೇ ವಸತಿಗೃಹದ ವಾಚ್ ಮೆನ್ ಎಂದು ಹೇಳಿದ ಸೈಕೋ, ನಂತರ ನಾನು ಕಳ್ಳ. ಅದ್ರಿಂದ ನನ್ನ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದಿದ್ದ. ಸುಮಾರು ೧೦ ನಿಮಿಷಗಳ ಕಾಲ ಯುವತಿಯರ ಬಳಿ ಚಾಕು ಹಿಡಿದು ನಿಂತಿದ್ದ ಸೈಕೋ, ನಂತ್ರ ಬಾಲ್ಕನಿಗೆ ಹೋಗಿ ಯುವತಿಯರ ಒಳ ಉಡುಪನ್ನ ಮೂಸಿ ನೋಡುತ್ತಿದ್ದ. ಒಂದೊಂದು ಒಳ ಉಡುಗಳನ್ನೂ ಹಿಡಿದುಕೊಂಡು ಇದು ನಿನ್ನದ, ನಿನ್ನದ ಎಂದು ನಾಲ್ವರು ಯುವತಿಯರನ್ನ ಕೇಳಿದ್ದಾನೆ.

ಭಯದಿಂದ ಯುವತಿಯರು ನನ್ನದಲ್ಲ ಎಂದಾಗ ಬಟ್ಟೆಗಳನ್ನ ಬಿಸಾಕಿದ್ದಾನೆ. ಸೈಕೋನ ವರ್ತನೆಗಳನ್ನು ಕಂಡ ಯುವತಿಯರು ಜೋರಾಗಿ ಕಿರುಚಿಕೊಂಡಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಸೈಕೋ ಹೋದ ನಂತರ ಸೆಕ್ಯುರಿಟಿಗಳನ್ನ ಕರೆದು ಪರಿಶೀಲನೆ ನಡೆಸಿದಾಗ ವಸತಿಗೃಹದಲ್ಲೇ ಕೂತು ಸಿಗರೇಟ್ ಸೇದಿ, ಅಲ್ಲೇ ಉಗಿದಿದ್ದು ಕಂಡು ಬಂದಿದೆ. ಭಯಗೊಂಡ ಮೆಟ್ರೋ ಚಾಲಕಿಯರು ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಕಾಮಾಂಧ ಸೈಕೋಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಂಟು ತಿಂಗಳ ಹಿಂದೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಗೂ ನುಗ್ಗಿದ ಇಂತದೇ ಸೈಕೋ ಪ್ರಕರಣ ಇನ್ನೂ ನೆನಪಿರುವಾಗಲೇ ಮತ್ತೊಂದು ಸೈಕೋ ಪ್ರಕರಣ ಬೆಳಕಿಗೆ ಬಂದಿರೋದು ಆತಂಕ ಮೂಡಿಸಿದೆ.