ರ್ಯಾಗಿಂಗ್​ ಗೆ ಬೇಸತ್ತು ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​​- ಬಹಿರಂಗವಾಯ್ತು ಮೇಘನಾ ಮೇಲೆ ನಡೆದಿದ್ದ ರ್ಯಾಗಿಂಗ್ ದೃಶ್ಯ!!

ಸಿಲಿಕಾನ ಸಿಟಿಯನ್ನೇ ಬೆಚ್ಚಿಬೀಳಿಸಿದ್ದ ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್​ ಸಿಕ್ಕಿದೆ. ಮೇಘನಾ ಸಾವಿಗೆ ಕಾರಣವಾದ ರ್ಯಾಗಿಂಗ್​ ವಿಡಿಯೋ ಸಿಕ್ಕಿದ್ದು, ಅದರಲ್ಲಿ ಸಹಪಾಠಿಗಳು ಮೇಘನಾಳನ್ನು ಅವಮಾನಿಸಿದ ದೃಶ್ಯವಿದೆ.

 ಹೀಗಾಗಿ ಮೇಘನಾ ರ್ಯಾಗಿಂಗ್​ ಭೂತಕ್ಕೆ ಬಲಿಯಾಗಿದ್ದಾಳೆ ಎಂಬ ಮೇಘನಾ ಪೋಷಕರ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ.
ದಯಾನಂದ ಸಾಗರ ಕಾಲೇಜಿನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೋಮಾ ಓದುತ್ತಿದ್ದ ಮೇಘನಾ ಫೆ.5 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಳು. ಈ ವೇಳೆ ಆಕೆಯ ಹೆತ್ತವರು ಮೇಘನಾ ಕಾಲೇಜಿನ ಎಲೆಕ್ಷನ್​ನಲ್ಲಿ ಸೋತಿದ್ದು, ಅದಕ್ಕಾಗಿ ತನ್ನ ಮಗಳನ್ನು ಹೀಯಾಳಿಸಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗಲೇ ಇದೀಗ ವಿಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಮೇಘನಾಳನ್ನು ಕೆಲ ಹುಡುಗಿಯರು ಹಾಗೂ ಹುಡುಗರು ರೇಗಿಸುವ ಅವಮಾನಿಸುವ ಹಾಗೂ ಜಗಳವಾಡುವ ದೃಶ್ಯವಿದೆ.

ಈ ಜಗಳದ ವೇಳೆ ಮೇಘನಾಳನ್ನು ಆಕೆಯ ಸಹಪಾಠಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಚುನಾವಣೆ ವೇಳೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ವಿದ್ಯಾರ್ಥಿನಿಯರು ಮಗಳನ್ನು ಹೀಯಾಳಿಸುತ್ತಿದ್ದಳು. ಮೇಘನಾ ನಡತೆ ಸರಿ ಇಲ್ಲ. ಆಕೆಯ ಜತೆ ಸೇರಬೇಡಿ ಎಂದು ತರಗತಿಯಲ್ಲಿದ್ದ 70 ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಿದ್ದಳು. ಅದನ್ನು ಓದಿದ ಸಹಪಾಠಿಗಳು, ಮಗಳ ಜತೆ ಮಾತನಾಡುತ್ತಿರಲಿಲ್ಲ. ಎನ್ನಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕಾಲೇಜು ಮಟ್ಟದ ಚುನಾವಣೆ ಗಲಾಟೆ ಪ್ರತಿಭಾವಂತ ವಿದ್ಯಾರ್ಥೀನಿಯೊರ್ವಳು ಬಲಿ ತೆಗೆದುಕೊಂಡಿದ್ದು ಮಾತ್ರ ದುರಂತವೇ ಸರಿ.