ರೌಡಿಮೇಲೆ ಗುಂಡಿನ ದಾಳಿ- ಮತ್ತೆ ಘರ್ಜಿಸಿದ ಖಾಕಿ ಗನ್!!

ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೊಲೀಸ್ರು ರೌಡಿಶೀಟರ್ ಗಳನ್ನು ಮಟ್ಟಹಾಕಲು ಮುಂದಾಗಿದ್ದಾರೆ.

ಇಂದು ಮುಂಜಾನೆ ನಗರದಲ್ಲಿ ರೌಡಿಶೀಟರ್ ಮೇಲೆ ಪೊಲೀಸ್ರು ಫೈರಿಂಗ್ ನಡೆಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ರೂಪೇಶ್ ಅಲಿಯಾಸ್ ನಿರ್ಮಲ್ ಗುಂಡೇಟಿ ಒಳಗಾದ ರೌಡಿ. ಮತ್ತೊಬ್ಬ ರೌಡಿಶೀಟರ್ ಆತುಷ್ ಎಂಬುವನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಚಾಮರಾಜಪೇಟೆ ಪೊಲೀಸ್ರು ಹಾಗೂ ಕಾಟನ್ ಪೇಟೆ ಪೊಲೀಸ್ರು ಜಂಟಿ ಕಾರ್ಯಚಾರಣೆ ನಡೆಸಿ ಬಂಧಿಸಲು ತೆರಳಿದ್ರು. ಈ ವೇಳೆ ಕುಮಾರ್ ಎಂಬ ಪೇದೆ ಮೇಲೆ ಚಾಕು ವಿನಿಂದ ಕೈ ಗೆ ಹಲ್ಲೆ ಮಾಡಿದ್ದ. ಶರಣಾಗುವಂತೆ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ರು. ಆರೋಪಿ ಹಲ್ಲೆಗೆ ಮುಂದಾದ ಈ ಹಿನ್ನಲೆಯಲ್ಲಿ ಕಾಟನ್ ಪೇಟೆ ಇನ್ಸ್ ಪೆಕ್ಟರ್ ಕುಮಾರ ಸ್ವಾಮಿ ರೌಡಿಶೀಟರ್ ಎಡಗಾಲಿಗೆ ಗುಂಡು ಹಾರಿಸಿದ್ರು.

ಆರೋಪಿ ಕೆಳಗೆ ಬಿದ್ದ ಬಳಿಕ ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ರೌಡಿಶೀಟರ್ ರೂಪೇಶ್ ಹಾಗೂ ಪೊಲೀಸ್ ಪೇದೆ ಕುಮಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ರೂಪೇಶ್ ನಾ ಮೇಲೆ ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್ ಜಾರಿ ಆಗಿದ್ರು. ಕೋರ್ಟ್ ಗೆ ಹಾಜರಾಗದೆ ಮೂರು ವರ್ಷದಿಂದ ತಲೆ ಮೇರೆಸಿಕೊಂಡಿದ್ದ. ಈ ಹಿನ್ನಲೆಯಲ್ಲಿ ಬಂಧಿಸಲು ಹೋದಾಗ ಘಟನೆ ಸಂಭಂವಿಸಿದೆ. ಇನ್ನು ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.