ಮಾಜಿ ಮೇಯರ್​ ಮಂಜುನಾಥ್ ರೆಡ್ಡಿಯವರ ಗೂಂಡಾಗಿರಿ ಹೇಗಿತ್ತು ನೋಡಿ….!! ಅಕ್ರಮವನ್ನು ಪ್ರಶ್ನಿಸಿದ್ದೇ ತಪ್ಪಾ?

ನಳಪಾಡ್,ಪೆಟ್ರೋಲ್ ನಾರಾಯಣ ಸ್ವಾಮಿ ಪಾಲಿಗೆ ಇದೀಗ ಬಿಬಿಎಂಪಿ ಮಾಜಿ ಮೇಯರ್​ ಮಂಜುನಾಥ ರೆಡ್ಡಿ ಸೇರ್ಪಡೆಯಾಗಿದ್ದು, ಅಕ್ರಮ ಪ್ರಶ್ನಿಸಿದವರ ಮೇಲೆ ದರ್ಪ ತೋರಿದ್ದಾರೆ.

ad


ಮಂಜುನಾಥ ರೆಡ್ಡಿ ಹಲ್ಲೆ ಮಾಡಿರೋ ವಿಡಿಯೋ ಇದೀಗ ವೈರಲ್​ ಆಗಿದ್ದು ಕಾಂಗ್ರೆಸ್​​ ನಾಯಕರ ಈ ಮುಗಿಯದ ದರ್ಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿವಾಳ ವಾರ್ಡ್​​ನ ತಾವರೆಕೆರೆ ಬಿಬಿಎಂಪಿ ಕಚೇರಿಯಲ್ಲಿ ಪಡಿತರ ಚೀಟಿ ವಿತರಿಸಲಾಗುತ್ತಿತ್ತು. ಆದರೇ ಈ ಪಡಿತರ ಚೀಟಿ ವಿತರಣೆಯಲ್ಲಿ ಅಕ್ರಮ ನಡೆದಿದೆ ಹಾಗೂ ಅನಗತ್ಯವಾಗಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಅಕ್ರಮ ಪ್ರಶ್ನಿಸಲು ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಸ್ಥಳಕ್ಕೆ ತೆರಳಿದ್ದರು.

 

ಈ ವೇಳೆ ಸ್ಥಳಕ್ಕೆ ತೆರಳಿದ ಮಂಜುನಾಥ ರೆಡ್ಡಿ ಹಾಗೂ ಆತನ ಬೆಂಬಲಿಗರು ರವಿಕೃಷ್ಣಾ ರೆಡ್ಡಿ ಹಾಗೂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ರವಿಕೃಷ್ಣಾ ರೆಡ್ಡಿ ಬಿಬಿಎಂಪಿ ದಾಖಲೆಗಳನ್ನು ನೀಡುವಂತೆ ಪ್ರಶ್ನಿಸಿದ್ದರು. ಇದಕ್ಕೆ ಕೋಪಗೊಂಡ ಮಂಜುನಾಥ ರೆಡ್ಡಿ ಕಡೆಯವರು ಹಲ್ಲೆ ಮಾಡಿದ್ದಾರೆ. ಮೊಬೈಲ್​ ರೆಕಾರ್ಡ್​ ಮಾಡಿಕೊಳ್ಳಲು ಯತ್ನಿಸಿದವರ ಮೇಲೂ ಮಂಜುನಾಥ ರೆಡ್ಡಿ ಕಡೆಯವರು ಹಲ್ಲೆ ಮಾಡಿದ್ದು, ಪೊಲೀಸರು ಮಧ್ಯಸ್ತಿಕೆ ವಹಿಸಿದರೂ ಹಲ್ಲೆ ತಡೆಯಲು ಸಾಧ್ಯವಾಗಿಲ್ಲ.