ಓಝೋನ್ ಗೆ ಲಗ್ಗೆ ಇಟ್ಟ ಐಟಿ ಅಧಿಕಾರಿಗಳು !! ತೆರಿಗೆ ವಂಚನೆಯ ಪದರ ಸೀಳಿದ ಆಫೀಸರ್ಸ್ !!

ಬೆಂಗಳೂರಿನಲ್ಲಿ ಇಂದು ಐಟಿ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ಕಟ್ಟಡ ನಿರ್ಮಾಣ ಸಂಸ್ಥೆ ಒಜೋನ್ ಗ್ರೂಪ್ ಗೆ ಐಟಿ ಶಾಕ್ ನೀಡಿದೆ.

ಬೆಂಗಳೂರಲ್ಲಿರುವ ಓಜೋನ್ ಗ್ರೂಪ್ ಕಚೇರಿ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿರೋ ಐಟಿ ಅಧಿಕಾರಿಗಳು ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹಲಸೂರು ರಸ್ತೆಯಲ್ಲಿ ಕಚೇರಿ ಹೊಂದಿರೋ ಓಜೋನ್ ಗ್ರೂಪ್, ರಾಜ್ಯದ ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆಯಾಗಿದೆ.

ಬೆಂಗಳೂರು, ಚೆನ್ನೈ, ಗೋವಾ, ಮುಂಬೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ತೆರಿಗೆ ವಂಚನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ದೂರುಗಳ ಪ್ರಾಥಮಿಕ ತನಿಖೆ ನಡೆಸಿದ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದೆ.