ಸಿದ್ದರಾಮಯ್ಯ ಆಪ್ತನಿಗೆ ಐಟಿ ಶಾಕ್ !! ಇದು ಸಿದ್ದರಾಮಯ್ಯ ಟಾರ್ಗೆಟ್ !!

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಟಾರ್ಗೆಟ್ ಮಾಡುತ್ತಿದೆಯೇ ? ಹೌದು ಎನ್ನುತ್ತವೆ ಇತ್ತಿಚಿನ ಬೆಳವಣಿಗೆಗಳು.

 ಮಂಡ್ಯ ಮಳವಳ್ಳಿ ಮೂಲದ ಸಿಎಂ ಆಪ್ತ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ನಡೆದು ಒಂದು ದಿನ ಕಳೆಯುತ್ತಿದ್ದಂತೆ ಇಂದು ಮತ್ತೆ ಸಿಎಂ ಆಪ್ತನೊಬ್ಬನ ಮನೆ ಮೇಲೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಮುಖಂಡನೂ ಆಗಿರುವ ಸಿಎಂ ಸಿದ್ದರಾಮಯ್ಯ ಪರಮಾಪ್ತನೂ ಆಗಿರುವ ಬೆಂಗಳೂರಿನ ಚುಂಚಘಟ್ಟದ ಲಕ್ಷ್ಮಣ್ ಇಂದು ಐಟಿ ದಾಳಿಗೆ ಒಳಗಾದವರು. ಚುಂಚಘಟ್ಟದಲ್ಲಿರುವ ಲಕ್ಷ್ಮಣ್ ನಿವಾಸ, ಕನಕಪುರ ರಾಮನಗರದಲ್ಲಿರುವ ಆಸ್ತಿ ಪಾಸ್ತಿಗಳ ಮೇಲೆ ಐಟಿ ದಾಳಿ ನಡೆದಿದೆ. ಲಕ್ಷ್ಮಣ್ ಗೆ ಸೇರಿರೋ ಹಾರೋಹಳ್ಳಿಯ ಫಾರ್ಮ್ ಹೌಸ್ ಮೇಲೂ ಐಟಿ ದಾಳಿ ನಡೆದಿದೆ.

ಇಂದು ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ದಾಳಿ ನಡೆಸಿರುವ ದೆಹಲಿ ಕಚೇರಿಯ ಐಟಿ ಅಧಿಕಾರಿಗಳು ಈ ಬಗ್ಗೆ ಸ್ಥಳೀಯ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಮೂವತ್ತು ಅಧಿಕ ಅಧಿಕಾರಿಗಳು ಲಕ್ಷ್ಮಣ್ ನಿವಾಸವನ್ನು ಜಾಲಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿಯಾಗಿಸಿ ನಡೆಸಿದ ದಾಳಿ ಎನ್ನಲಾಗುತ್ತಿದ್ದು, ಚುನಾವಣೆ ಸಂಧರ್ಭದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಒಂದಾದರೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಸಬೇಕು ಎಂಬ ಪಣತೊಟ್ಟಂತೆ ಕಾಣುತ್ತಿದೆ.