ಹಾರಾಟ ನಿಲ್ಲಿಸಿದ ಜೆಟ್​ ಏರವೇಸ್​​! ಸಂಬಳವಿಲ್ಲದೇ ಕಂಗೆಟ್ಟ ಸಿಬ್ಬಂದಿ!!

ನಷ್ಟದಲ್ಲಿರುವ ಜೆಟ್ ಏರ್​ವೇಸ್​ ಸಂಸ್ಥೆ ಕೊನೆಗೂ ತನ್ನ ಹಾರಾಟಕ್ಕೆ ಅಂತ್ಯ ಹಾಡಲು ನಿರ್ಧರಿಸಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಿಲ್ಲಿಸಿ ಕೇವಲ 10 ಮಾರ್ಗದಲ್ಲಿ ಮಾತ್ರ ಹಾರಾಟ ನಡೆಸಿದ್ದ ಜೆಟ್​​ ಏರ್​ವೇಸ್​ ಈಗ ತನ್ನ ವಿಮಾನಗಳ ಹಾರಾಟವನ್ನೆ ನಿಲ್ಲಿಸಲಿದೆ.

ad

 

ಪ್ರಸ್ತುತ ಜೆಟ್​​ ಏರ್​ವೇಸ್​ 8 ಸಾವಿರ ಕೋಟಿ ರೂ ಸಾಲದ ಹೊರೆಯಲ್ಲಿದೆ. ಹೀಗಾಗಿ ಕನಿಷ್ಠ 10 ವಿಮಾನಗಳ ಹಾರಾಟ ವೆಚ್ಚವನ್ನು ಭರಿಸುವ ಶಕ್ತಿ ಇಲ್ಲದೇ ಇರೋದರಿಂದ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.  ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಲ ನಿರ್ಣಯ ಯೋಜನೆಯಡಿ ಹೊಸ ಹಣವನ್ನು ಸಂಗ್ರಹಿಸಬೇಕಿದೆ. ತೀವ್ರ ಸಾಲದ ಹೊರೆಯಿಂದಾಗಿ ಜೆಟ್‌ ಏರ್‌ವೇಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದು ಈ ನಿರ್ಣಯದಿಂದಾಗಿ ಸುಮಾರು 16 ಸಾವಿರಕ್ಕೂ ಹೆಚ್ಚು ನೌಕರರ ಭವಿಷ್ಯ ಅತಂತ್ರವಾಗಿದೆ.

ಏ.18ರಿಂದ ಜೆಟ್‌ ಏರ್‌ವೇಸ್‌ನ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತಿದ್ದು ನೌಕರರ ಗೋಳು ಹೇಳತೀರದಾಗಿದೆ. ಈಗಾಗಲೆ ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದ ಜೆಟ್ ಏರ್‌ವೇಸ್ ಸಿಬ್ಬಂದಿಗಳ ಕುಟುಂಬಗಳು ಸದ್ಯ ಬೀದಿಗೆ ಬರುವ ಹಂತದಲ್ಲಿದೆ.