ಸಂಬಳ-ಸೌಲಭ್ಯಕ್ಕಾಗಿ ಬೀದಿಗಿಳಿದ್ರು ಕಿದ್ವಾಯಿ ನೌಕರರು

ರಾಜ್ಯದಲ್ಲಿ ಕ್ಯಾನ್ಸರ್​​​ ರೋಗಕ್ಕೆ ಚಿಕಿತ್ಸೆ ನೀಡೋದರಲ್ಲಿ ಕಿದ್ವಾಯಿ ಆಸ್ಪತ್ರೆ ಫೇಮಸ್​​. ಆದರೇ ಇದೀಗ ಅಲ್ಲಿನ ಸಿಬ್ಬಂದಿಗಳ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದ್ದು, ವೇತನಕ್ಕಾಗಿ ಕಿದ್ವಾಯಿ ಆಸ್ಪತ್ರೆಯ ಬೀದಿಗಿಳಿದಿದ್ದು, ಚಿಕಿತ್ಸೆಗಾಗಿ ಬಂದ ರೋಗಿಗಳು ಪರದಾಡುವಂತಾಗಿದೆ.

 ನಗರದಲ್ಲಿರುವ ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್​ ಚಿಕಿತ್ಸೆಗೆ ಪ್ರಸಿದ್ಧಿ ಪಡೆದಿದೆ. ರಾಜ್ಯ ಸೇರಿದಂತೆ ಹೊರರಾಜ್ಯದಿಂದಲೂ ಸಾಕಷ್ಟು ಜನರು ಕಿದ್ವಾಯಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೇ ಕಳೆದ ಐದು ವರ್ಷಗಳಿಂದ ಕಿದ್ವಾಯಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸಂಬಳವಿದಲ್ಲಂತಾಗಿದ್ದು, ಸೌಲಭ್ಯಗಳಿಗಾಗಿ ಇದೀಗ ಗುತ್ತಿಗೆ ನೌಕರರು ಪ್ರತಿಭಟನೆಗೆ ಮುಂಧಾಗಿದ್ದಾರೆ. ಈ ಗುತ್ತಿಗೆ ನೌಕರರನ್ನು ಕಡಿಮೆ ವೇತನ ನೀಡಿ ಹಗಲು ರಾತ್ರಿ ದುಡಿಸಿಕೊಳ್ಳುತ್ತಾರೆ ಎನ್ನಲಾಗಿದ್ದು, ಗುತ್ತಿಗೆ ಸಿಬ್ಬಂದಿಗಳಿಗೆ ಅರೆ ಕಾಲಿಕ ಐಡಿ ಕಾರ್ಡ್ ಕೂಡ ನೀಡಿಲ್ಲ, ಗುತ್ತಿಗೆ ಸಿಬ್ಬಂದಿ ಅದೆಷ್ಟೋ ಸಲ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಲಿಂಗೇಗೌಡರಿಗೆ ವೇತನ ಹೆಚ್ಚು ಮಾಡಲು ಮನವಿ ಮಾಡಿದ್ರೂ ಕ್ಯಾರೆ ಅಂತಿಲ್ಲ. ಹೀಗಾಗಿ ಇವತ್ತು ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

ಬೆಳಗ್ಗೆನಿಂದಲೂ ಆಸ್ಪತ್ರೆ ಎದುರು ಸೇರಿರುವ ಸಿಬ್ಬಂದಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಕೆಲಸ ಮಾಡುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಇನ್ನು ಪ್ರತಿಭಟನಾಕಾರರ ಮನವೊಲಿಸಲು ನಿರ್ದೇಶಕ ಲಿಂಗೇಗೌಡರು ಸಂಧಾನ ನಡೆಸಿದ್ರು. ಆದರೇ ಎರಡು ಬಾರಿ ಮಾತುಕತೆ ನಡೆಸಿದರೂ ಫಲಕಾರಿಯಾಗಿಲ್ಲ. ವೇತನ ಹೆಚ್ಚಳ ಮತ್ತು ಮೂಲ ಸೌಕರ್ಯ ಕಲ್ಪಿಸದೇ ನಾವು ಕರ್ತವ್ಯಕ್ಕೆ ಹಾಜರಾಗಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಇನ್ನು ಸಿಬ್ಬಂದಿಗಳ ಮುಷ್ಕರದಿಂದ ದೂರ-ದೂರದ ಊರಿನಿಂದ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಪರದಾಡುವಂತಾಗಿದ್ದು ಮಾತ್ರ ದುರಂತವೇ ಸರಿ.