ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಪಿಟಿಸಿಎಲ್​ನ ಜನರಲ್​ ಕೆಟಗರಿ ನೌಕರರು ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಪಾಲು ಸಮಬಾಳು ಅಡಿ ಸಂವಿಧಾನದ ಆಶಯದಂತೆ ನ್ಯಾಯ ಕೊಡಿ ಅಂತಾ ಆಗ್ರಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ತಕ್ಷಣವೇ ಕೆಪಿಟಿಸಿಯಲ್​ ನೌಕರರಿಗೆ ಪದೋನ್ನತಿ ಮೀಸಲಾತಿ ನೀತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗ್ತಿದೆ. ಈಗಾಗಲೇ ಫ್ರೀಡಂಪಾರ್ಕ್​ನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದ್ದು, ಕೆಲಹೊತ್ತಿನಲ್ಲೇ ಕಾವೇರಿಭವನದವರೆಗೂ ನೌಕರರು ಪ್ರತಿಭಟನಾ ಜಾಥಾ ನಡೆಸಲಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಿಂದಲೂ ನೌಕರರು ಬೃಹತ್​ ಪ್ರತಿಭಟನೆಗೆ ಆಗಮಿಸಿದ್ದಾರೆ.
====================

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ಧ್ಯೇಯ ವಾಕ್ಯದಡಿ ಸುಪ್ರೀಂ ಕೋರ್ಟ್‌ ಈಗಾಗಲೇ ನೀಡಿರುವ ಆದೇಶವನ್ನು ಕೆಪಿಟಿಸಿಎಲ್‌ ಪಾಲಿಸದ ಕಾರಣ ಹಲವು ನೌಕರರಿಗೆ ಅನ್ಯಾಯವಾಗಿದೆ. 1978ರಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನೀತಿಗೆ ವಿರುದ್ಧ ನೀಡಲಾದ ಸಾಂದರ್ಭಿಕ ಜೇಷ್ಠತೆಯನ್ನು ಎಂ.ಜಿ.ಬಡಪ್ಪನವರ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಕಾನೂನಿಗೆ ವಿರುದ್ಧವಾಗಿ ನೀಡಿದ್ದ ಸಾಂದರ್ಭಿಕ ಜೇಷ್ಠತೆಯನ್ನು ಆಗ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಬಡಪ್ಪನವರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಪಾಲನೆಯಾಗಿದೆ. ಆದರೆ, ಕೆಪಿಟಿಸಿಎಲ್‌ ಇದುರೆಗೂ ಆದೇಶ ಪಾಲನೆಗೆ ಮುಂದಾಗದ ಕಾರಣ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗಗಳ ನೌಕರರು ಮತ್ತು ಅಧಿಕಾರಿಗಳು ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here