ನಗರದಲ್ಲಿ ಉದ್ದದ ಬಾವುಟ ಪ್ರದರ್ಶನ-ಲಿಮ್ಕಾ ದಾಖಲೆಗೆ ಕನ್ನಡ ಮನಸು ವೇದಿಕೆಯಿಂದ ವಿಭಿನ್ನ ಪ್ರಯತ್ನ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲಿಮ್ಕಾ ಬುಕ್​ನಲ್ಲಿ ದಾಖಲೆ ನಿರ್ಮಿಸುವ ಉದ್ದೇಶದಿಂದ ಅತಿ ಉದ್ದದ ಕನ್ನಡ ಬಾವುಟ ಪ್ರದರ್ಶನ ನಗರದಲ್ಲಿ ನಡೆಯಿತು. 2 ಸಾವಿರದ 40 ಮೀಟರ್​ ಉದ್ದದ ಬಾವುಟವನ್ನು ಕನ್ನಡ ಮನಸುಗಳ ವೇಧಿಕೆಯಿಂದ ಸಿದ್ಧಪಡಿಸಲಾಗಿತ್ತು. ಹಳದಿ ಮತ್ತು ಕೆಂಪು ಬಣ್ಣದ ಈ ಉದ್ದದ ಬಾವುಟವನ್ನು ಜಯನಗರದ ಸಂಗಮ ಸರ್ಕಲ್​ನಿಂದ ಮೆರವಣಿಗೆ ಕೊಂಡೊಯ್ಯಲಾಯಿತು. ರಸ್ತೆಯುದ್ದಕ್ಕೂ ಸಾರ್ವಜನಿಕರು ಈ ಧ್ವಜ ವೀಕ್ಷಿಸಿದರು.

ಸಾಹಿತಿ ಚಂದ್ರಶೇಖರ್ ಪಾಟೀಲ್, ಧ್ವಜಾರೋಹಣ ಮಾಡುವ ಬಾವುಟದ ಮೆರವಣಿಗೆಗೆ ಚಾಲನೆ ನೀಡಿದರು. ಈ ಧ್ವಜ ಕರ್ನಾಟಕ ಹಾಗೂ ದೇಶದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ದದ ಕನ್ನಡ ಬಾವುಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಂದರವಾಗಿ ಅತಿ ಉದ್ದದ ಈ ಧ್ವಜ ಮೆರವಣಿಗೆಯಲ್ಲಿ ಶಾಸಕ ಸೋಮಶೇಖರ್, ವಿಜಯ್ ಕುಮಾರ್, ಸೌಮ್ಯ ರೆಡ್ಡಿ, ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ನಗರದ ವಿವಿಧ ಶಾಲೆಯ ಸಾವಿರಾರು ಮಕ್ಕಳು ಭಾಗಿಯಾಗಿದ್ದರು.