ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮರಣ ಮಳೆ ಒಂದೇ ರಾತ್ರಿ ನಾಲ್ವರನ್ನು ಬಲಿ ಪಡೆದ ಮಳೆರಾಯ ಯಮದೂತ ಮಳೆಗೆ ಮೋರಿಯಲ್ಲಿ ಕೊಚ್ಚಿ ಹೋದ ಅರುಣ್​ ಶಿವಾನಂದ ಸರ್ಕಲ್​ ಅಂಡರ್​ಪಾಸ್​ ಮೋರಿ ಪಾಲಾದ ಅರುಣ್​ ಅರುಣ್​ ಮೋರಿಯಲ್ಲಿ ಕೊಚ್ಚಿ ಹೋದ ವೀಡಿಯೋ ಬಿಟಿವಿಗೆ ಲಭ್ಯ  18 ವರ್ಷದ ಯುವಕ ಅರುಣ್​ ಕೊನೆಯ ಕ್ಷಣಗಳು ಕರುಣಾಜನಕ

———————–

ಸಿಎಂ ಮನೆಯಿಂದ ಕಣ್ಣಳತೆ ದೂರದಲ್ಲಿ ಅರುಣ್​ ಕೊಚ್ಚಿ ಹೋದ ಮೋರಿ ಶಿವಾನಂದ ಸರ್ಕಲ್ ಅಂಡರ್​ಪಾಸ್​​ನಲ್ಲಿ ಕೊಚ್ಚಿ ಹೋಗಿದ್ದ ಅರುಣ್​ಸಿಎಂ ಮನೆಯಿಂದ ಕೇವಲ 100 ಮೀಟರ್​ ಅಂತರದಲ್ಲಿ ಘೋರ ದುರಂತ ಸಿದ್ದರಾಮಯ್ಯ ನಿವಾಸದ ಬಳಿಯಲ್ಲೇ ನರಕ ಸೃಷ್ಟಿಸಿದೆ ರಾಜಧಾನಿ ವಿಧಾನಸೌಧದಿಂದ ಕೇವಲ 2 ಕಿಮೀ ದೂರದಲ್ಲೇ ಮಹಾ ದುರಂತ ರಾಜಧಾನಿಯ ಘೋರ ಅವಾಂತರಗಳಿಗೆ ಇದಕ್ಕಿಂತ ಸಾಕ್ಷಿ ಬೇಕಾ? ರಾಜಧಾನಿಯಲ್ಲಿ ಯಮದೂತ ಆಗಿರೋ ಅಂಡರ್​ಪಾಸ್​ ಫುಟ್​ಪಾತ್​ಗಳುದುರಂತ ನಡೆದ ಸ್ಥಳದಲ್ಲಿ ಬಿಟಿವಿ ರಿಪೋರ್ಟರ್​ ಗ್ರೌಂಡ್ ರಿಪೋರ್ಟ್​ ದುರಂತದ ಕ್ಷಣ ಕ್ಷಣವನ್ನು ನಿಮ್ಮ ಮುಂದಿಡುತ್ತೆ ಬಿಟಿವಿ
————-

ರಾಜ್ಯ ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಒಂದೇ ರಾತ್ರಿಯಲ್ಲಿ ನಾಲ್ಕು ಜನರನ್ನ ಬಲಿ ಪಡೆದ ವರುಣ ಮಳೆ ಅವಾಂತರಕ್ಕೆ ಧರೆಗುರುಳಿದ ನೂರಾರು ಮರಗಳುತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ
===

ಅಂಡರ್​​ಪಾಸ್​ನಲ್ಲಿ ಕೊಚ್ಚಿ ಹೋಗಿದ್ದ ಅರುಣ್​ ಮೃತದೇಹ ಪತ್ತೆ ಕಿನ್ನೋ ಥಿಯೇಟರ್​​ ಬಳಿಯ ಮಾರಿಯಮ್ಮ​ ದೇವಸ್ಥಾನದ ಬಳಿ ರಾಜಕಾಲುವೆಯಲ್ಲಿ ಪತ್ತೆ ವಯ್ಯಾಲಿಕವಾಲ್​ ನಿವಾಸಿಯಾಗಿದ್ದ 18ವರ್ಷದ ವರುಣ್​​ ರಾತ್ರಿ 8.30ರ ಸುಮಾರಿಗೆ ಶೇಷಾದ್ರಿಪುರಂ ಅಂಡರ್​​ಪಾಸ್​​ನಲ್ಲಿ ಕೊಚ್ಚಿ ಹೋಗಿದ್ದ ಅರುಣ್​ ಸ್ನೇಹಿತನ ಜೊತೆ ವಯ್ಯಾಲಿಕಾವಲ್​ಗೆ ತೆರುಳುತ್ತಿದ್ದಾಗ ದುರ್ಘಟನೆ​ ಮನೆಗೆ ತೆರಳುವಾಗ ಶೇಷಾದ್ರಿಪುರಂ ಅಂಡರ್​​ಪಾಸ್​ ಬಳಿ ಅರುಣ್​ ಬೈಕ್​ ಕೆಟ್ಟು ಹೋಗಿತ್ತು ಸ್ನೇಹಿತನಿಗೆ ಬೈಕ್​ ಕೊಟ್ಟು ಮುಂದೆ ಬರ್ತಿದ್ದ ಅರುಣ್ ಬೈಕ್​ ನಿಲ್ಲಿಸಿ ನೋಡುವಷ್ಟರಲ್ಲಿ ಕೊಚ್ಚಿಹೋಗಿದ್ದ ಅರುಣ್​​ ಅರುಣ್​ ಕೊಚ್ಚಿ ಹೋಗಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ​ ಸ್ನೇಹಿತ ಸತತ 5 ಗಂಟೆ ಕಾರ್ಯಚಾರಣೆ ನಂತರ ಅರುಣ್​ ಮೃತದೇಹ ಪತ್ತೆ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ತಂಡ​​ದಿಂದ ಶೋಧಕಾರ್ಯ
=====
ಅರುಣನನ್ನ ಬಲಿ ಪಡೆದ ವರುಣ
=====
ವಯ್ಯಾಲಿಕವಾಲ್​ ನಿವಾಸಿಯಾಗಿದ್ದ 18 ವರ್ಷದ ಅರುಣ್​ ಮಲ್ಲೇಶ್ವರಂನ ಎಸಿ ಮೆಕ್ಯಾನಿಕ್​​ ಆಗಿ ಕೆಲ್ಸ ಮಾಡ್ತಿದ್ದ.ನಿನ್ನೆ ಕೆಲ್ಸದ ನಿಮ್ಮಿತ್ತ ಜಯನಗರಕ್ಕೆ ಹೋಗಿದ್ದ. ಜಯನಗರದಿಂದ ವಾಪಾಸ್​ ವಯ್ಯಾಲಿಕವಾಲ್​ಗೆ ತೆರಳುವಾಗ ರಣ ಮಳೆಗೆ ಸಿಕ್ಕಾಕಿಕೊಂಡಿದ್ದಾನೆ. ಮಳೆಯಿಂದಾಗಿ ಶೇಷಾದ್ರಿಪುರಂ ಅಂಡರ್​ಪಾಸ್​ ಬಳಿ ಬೈಕ್​ ಕೆಟ್ಟು ಹೋಗಿದೆ. ತನ್ನ ಬೈಕ್​ನ್ನ ಸ್ನೇಹಿತನಿಗೆ ನೀಡಿ ಅರುಣ್​​ ಅಂಡರ್​ಪಾಸ್​ ದಾಟುತಿದ್ದ. ಅರುಣ್​ ಸ್ನೇಹಿತ ಬೈಕ್​ನ್ನ ಸೈಡಲ್ಲಿ ನಿಲ್ಲಿಸಿ ನೋಡುವಷ್ಟರಲ್ಲಿ ಅರುಣ್​ ಕಾಣೆಯಾಗಿದ್ದಾನೆ. ಅಲ್ಲಿದ್ದ ಸ್ಥಳೀಯರು ಅರುಣ್​ ಕೊಚ್ಚಿಕೊಂಡು ಹೋಗಿದ್ದಾನೆಂದು ಸ್ನೇಹಿತನಿಗೆ ತಿಳಿಸಿದ್ದಾರೆ. ನಂತರ ಅರುಣ್​ ಸ್ನೇಹಿತ ಅರುಣ್​ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಈ ಮಧ್ಯೆ ಸ್ಥಳೀಯರು ಮಾಧ್ಯಮದವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ರು. ತಕ್ಷಣ ಸ್ಥಳಕ್ಕಾಗಮಿಸಿದ ಶೇಷಾದ್ರಿಪುರಂ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚಾರಣೆ ಕೈಗೊಂಡ್ರು. ಆದ್ರೆ, ಅಗ್ನಿಶಾಮಕ ಸಿಬ್ಬಂದಿ 2 ಗಂಟೆ ಸತತ ಕಾರ್ಯಚಾರಣೆ ನಡೆಸಿದ್ರು ಪ್ರಯೋಜನವಾಗಲಿಲ್ಲ. ಬಳಿಕ ಎನ್​ಡಿಆರ್​ಎಫ್​​ ತಂಡ ಸ್ಥಳಕ್ಕೆ ದೌಡಾಯಿಸಿ ಸೂಕ್ಷ್ಮವಾಗಿ ಅರುಣ್​ ಬಿದ್ದ ಜಾಗ ಪರಿಶೀಲಿಸಿ ಸತತ 3 ಮೂರು ಗಂಟೆ ಕಾರ್ಯಚಾರಣೆ ನಡೆಸಿದ್ರು. ಕೊನೆಗೆ ಕಿನ್ನೋ ಥಿಯೇಟರ್​ ಬಳಿಯ ಮಾರಿಯಮ್ಮ ದೇವಸ್ಥಾನದ ಬಳಿ ರಾಜಕಾಲುವೆಯ ಅರುಣ್​ ಮೃತದೇಹ ಪತ್ತೆಯಾಯ್ತು. ಬಳಿಕ ಅರುಣ್​​ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
===
ಬೈಟ್​: ವಿಜಯ್​ ಕುಮಾರ್​,ಮೃತ ಅರುಣ್​ ಚಿಕ್ಕಪ್ಪ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here