ಇದು ನ್ಯಾಯಾಂಗ ವ್ಯವಸ್ಥೆಯ ಅಪರೂಪದ ಪ್ರಕರಣ. ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡನೆಗೆ ವ್ಯಕ್ತಿಯೊಬ್ಬರು ರಾಜ್ಯ ಹೈಕೊರ್ಟ್ ಮೊರೆ ಹೋಗಿದ್ದಾರೆ. 2012ರಲ್ಲಿ ಆಂಧ್ರ ಮೂಲದ ವ್ಯಕ್ತಿ ಬೆಂಗಳೂರಿನ ನಿವಾಸಿಯನ್ನು ಮದುವೆಯಾಗಿದ್ರು. ಆದ್ರೆ ದಾಂಪತ್ಯದಲ್ಲಿ ವಿರಸ ಕಾಣಿಸಿಕೊಂಡು ಇಬ್ರೂ ವಿವಾಹ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ರು. ಅರ್ಜಿದಾರರು ಅಮೇರಿಕದಲ್ಲಿ ಕೆಲಸದಲ್ಲಿರೋದ್ರಿಂದ ಪದೇ ಪದೇ ವಿಚಾರಣೆಗೆ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಸ್ಕೈಪ್​​​ ಅಥವಾ ಅಪ್ಲಿಕೇಷನ್ ಮೂಲಕ ವಿಚಾರಣೆ ನಡೆಸಿ ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿದಾರ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿದ್ರು. ಆದ್ರೆ ಮಧ್ಯಂತರ ಅರ್ಜಿ ತಿರಸ್ಕರಿಸಿದ್ದ ನ್ಯಾಯಾಲಯ ಖುದ್ದು ಸೆಪ್ಟೆಂಬರ್ 12 ರಂದು ಬರಬೇಕೆಂದು ಸೆ.8 ರಂದು ಆದೇಶ ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೊರ್ಟ್ ಮೊರೆ ಹೊಗಿದ್ದ ಟೆಕ್ಕಿ ಸ್ಕೈಪ್​​​ ವಿಡಿಯೋ ಕಾನ್ಪರೆನ್ಸ್​ ಮೂಲಕ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ ಹೈಕೊರ್ಟ್ ವಿದ್ಯುನ್ಮಾನ ಮಾಧ್ಯಮದ ಮೂಲಕ ವಿಚಾರಣೆ ನಡೆಸುವ ವಿಚಾರ ಈಗಾಗಲೇ ಸುಪ್ರೀಂ ಕೊರ್ಟ್ ಪೀಠದಲ್ಲಿದೆ. ಸುಪ್ರೀಂಕೊರ್ಟ್ ತೀರ್ಪು ಪ್ರಕಟ ಆಗೋವರೆಗೂ ಯಥಾಸ್ಥಿತಿ( ತಡೆ) ಕಾಯ್ದುಕೊಳ್ಳುವಂತೆ ಹೈಕೊರ್ಟ್ ಫ್ಯಾಮಿಲಿ ಕೋರ್ಟ್​ಗೆ ಆದೇಶಿಸಿದೆ.
======
ಬೈಟ್: ಅರುಣ್ ಶ್ಯಾಮ್, ಅರ್ಜಿ ದಾರ ಪರ ವಕೀಲ, (1:34-2:33)
======

ಸ್ಕೈಪ್​​ನಲ್ಲೇ ವಿಚಾರಣೆಗೆ ಕೋರಿಕೆ
========
ಇದು ನ್ಯಾಯಾಂಗ ವ್ಯವಸ್ಥೆಯ ಅಪರೂಪದ ಪ್ರಕರಣ ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡನೆಗೆ ಕೋರಿಕೆ ಕರ್ನಾಟಕ ರಾಜ್ಯ ಹೈಕೊರ್ಟ್ ಮೊರೆ ಹೋದ ಕಕ್ಷಿದಾರರು 2012ರಲ್ಲಿ ಬೆಂಗಳೂರು ನಿವಾಸಿ ಮದುವೆಯಾಗಿದ್ದ ಆಂಧ್ರದ ವ್ಯಕ್ತಿ ದಾಂಪತ್ಯ ವಿರಸದಿಂದ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್​ಗೆ ಅರ್ಜಿ ಆನಂತರ ಕೆಲಸ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ಅರ್ಜಿದಾರರು ಅಮೇರಿಕದಲ್ಲಿರೋದ್ರಿಂದ ಪದೇ ಪದೇ ವಿಚಾರಣೆಗೆ ಬರಲು ಅನಾನುಕೂಲ ಇದೇ ಕಾರಣಕ್ಕೆ ಸ್ಕೈಪ್​​​ ಅಥವಾ ಅಪ್ಲಿಕೇಷನ್ ಮೂಲಕ ವಿಚಾರಣೆ ಕೌಟುಂಬಿಕ ಕೋರ್ಟ್​ಗೆ ಅರ್ಜಿದಾರ ಪರ ವಕೀಲರ ಮಧ್ಯಂತರ ಅರ್ಜಿ ಆದ್ರೆ ಮಧ್ಯಂತರ ಅರ್ಜಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಫ್ಯಾಮಿಲಿ ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೊರ್ಟ್ ಮೊರೆ ಹೊಗಿದ್ದ ಟೆಕ್ಕಿ  ಸುಪ್ರೀಂನಲ್ಲಿ ಬಾಕಿ ಇದ್ದ ವಿದ್ಯುನ್ಮಾನ ಮಾಧ್ಯಮದ ಮೂಲಕ ವಿಚಾರಣೆ ವಿಚಾರ ಹೀಗಾಗಿ ಸುಪ್ರೀಂಕೊರ್ಟ್ ತೀರ್ಪು ಪ್ರಕಟ ಆಗೋವರೆಗೂ ಯಥಾಸ್ಥಿತಿಗೆ ಸೂಚನೆ ಫ್ಯಾಮಿಲಿ ಕೋರ್ಟ್​ಗೆ ಆದೇಶ ನೀಡಿದ ರಾಜ್ಯ ಹೈಕೋರ್ಟ್​

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here