ಬಿಸ್ಕತ್​ ಹಾಕಿ ನಾಯಿ ಕದ್ದ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ- ಕೊನೆಗೂ ನಾಯಿಕಳ್ಳನ ಬಂಧಿಸಿದ ಪೊಲೀಸರು!

Bengaluru: Man stolen Dog for money to drink got arrested.
Bengaluru: Man stolen Dog for money to drink got arrested.

ಮೊಬೈಲ್​ ಕದಿಯೋರನ್ನ ನೋಡಿರ್ತಿರಾ, ಹಣ,ಒಡವೆ,ಬೈಕ್​,ಕಾರು ಕದಿಯೋರು ಇದ್ದಾರೆ. ಆದರೇ ಮನೆ ಕಾವಲಿಗೆ ಅಂತ ಸಾಕೋ ನಾಯಿ ಕದಿಯೋರನ್ನು ನೋಡಿದ್ದೀರಾ?

 

ಸಿಲಿಕಾನ ಸಿಟಿಯಲ್ಲಿ ಇಂತಹ ಕಳ್ಳರೂ ಇದ್ದಾರೆ. ನಿಮ್ಮ ಮನೆ ನಾಯಿನಾ ಹುಶಾರಾಗಿ ನೊಡ್ಕೋಳಿ.
ಹೌದು ಸಿಲಿಕಾನ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಕೂಗಿದೆ ಧ್ವನಿಯಾಗುವಂತೆ ನಾಯಿ ಕದಿಯೋರು ಕೂಡ ಹುಟ್ಟಿಕೊಂಡಿದ್ದು, ಪೊಲೀಸರು ಕಂಗಾಲಾಗಿದ್ದಾರೆ. ಹೌದು ಗಿರಿನಗರ ಸೀತಾ ಸರ್ಕಲ್​ ಬಳಿ ಬೈಕ್​ನಲ್ಲಿ ಬಂದ ಇಬ್ಬರು ಆಸಾಮಿನಗಳು ನಾಯಿಗೆ ಬಿಸ್ಕತ್ ಆಸೆ ತೋರಿಸಿ ಕಳ್ಳತನ ಮಾಡಿ ಕೊಂಡೊಯ್ದ ಘಟನೆ ನಡೆದಿದೆ.

 

ಗಿರಿನಗರದ ಸೀತಾ ಸರ್ಕಲ್​ ನಿವಾಸಿ ಉಷಾ ಎಂಬುವವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ರ್ಯಾಟ್​ ವಿಲ್ಲರ್ ನಾಯಿ ಸಾಕಲಾಗಿತ್ತು. ಜನವರಿ 28 ರಂದು ರಾತ್ರಿ ವೇಳೆ ಮನೆ ಬಳಿ ಬಂದ ಸುರೇಶ್​ ಎಂಬಾತ ಹಾಗೂ ಆತನ ಸ್ನೇಹಿತ ನಾಯಿಗೆ ಬಿಸ್ಕತ್ ಹಾಕಿ ಯಾಮಾರಿಸಿ ನಾಯಿ ಕದ್ದು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಮನೆ ಮಾಲಿಕರಾದ ಉಷಾ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಸ್ಥಳದಲ್ಲೇ ಇದ್ದ ಸಿಸಿಟಿವಿ ತನಿಖೆಗೆ ನೆರವಾಗಿದೆ. ಸಿಸಿಟಿವಿಯಲ್ಲಿ ನಾಯಿಯನ್ನು ಕದಿಯೋ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಕೊನೆಗೂ ನಾಯಿಕಳ್ಳನನ್ನು ಪತ್ತೆ ಹಚ್ಚಿದ್ದು, ಆರೋಪಿ ಬಂಧಿಸಿ ನಾಯಿ ರಕ್ಷಿಸಿದ್ದಾರೆ. ಒಟ್ಟಿನಲ್ಲಿ ಜನ ನಾಯಿ ಕದಿಯೋ ಹಂತಕ್ಕೆ ತಲುಪಿರೋದು ಒಂದೆಡೆಯಾದ್ರೆ ನಾಯಿ ಕಳ್ಳರನ್ನು ಅರಸಿಕೊಂಡು ಓಡಾಡೋ ಸಂಕಷ್ಟ ಪೊಲೀಸರಿಗೆ ಎದುರಾಗಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here