ಹಾಲು ಬೇಕೆಂದ ಕಂದನ ಕಾಲು ಮುರಿದ ಲಕ್ಷ್ಮಿ- ಬನ್ನೇರುಘಟ್ಟದಲ್ಲಿ ಹೃದಯ ವಿದ್ರಾವಕ ಘಟನೆ!!

Bengaluru: Mother Elephant Breaks his baby Leg.

ಹೆತ್ತಮಗುವಿಗೆ ಹಾಲೂಣಿಸೋದು ಎಲ್ಲ ತಾಯಂದಿರಿಗೂ ಗೊತ್ತಿರುತ್ತೆ. ಆದರೇ ಇಲ್ಲೊಂದು ಹೆತ್ತಮ್ಮನಿಗೆ ಮಗುವಿಗೆ ಹಾಲುಣಿಸೋಕೆ ಗೊತ್ತಿಲ್ಲ. ಅಷ್ಟೇ ಅಲ್ಲ ಹಾಲಿಗಾಗಿ ಬಂದ ಕಂದಮ್ಮನನ್ನು ಕಂಡು ಕಂಗಾಲಾಗಿ ಝಾಡಿಸಿ ಒದ್ದು, ಕಾಲು ಮುರಿದು ಸುದ್ದಿಯಾಗಿದೆ. ಹೌದು ಇಷ್ಟಕ್ಕೂ ಆ ಮಹಾತಾಯಿ ಯಾರು ಅಂದ್ರಾ 25 ವರ್ಷದ ಹೆಣ್ಣಾನೆ ಲಕ್ಷ್ಮಿ.

Bengaluru: Mother Elephant Breaks his baby Leg.
Bengaluru: Mother Elephant Breaks his baby Leg.

ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ 25 ವರ್ಷದ ಹೆಣ್ಣಾನೆ ಲಕ್ಷ್ಮಿ ಭಾನುವಾರ ಮರಿಗೆ ಜನ್ಮ ನೀಡಿದೆ. ಆದರೆ ತನ್ನ ಮರಿಯನ್ನೇ ಹತ್ತಿರಕ್ಕೆ ಸೇರಿದ ತಾಯಾನೆ ಲಕ್ಷ್ಮೀ ಹಾಲು ಕುಡಿಯಲು ಹೋದ ಮರಿಯ ಕಾಲು ಮುರಿದಿದೆ. ಮರಿ ಹಾಕಿದ ತಕ್ಷಣ ಆ ಮರಿ ಎದ್ದು ತಾಯಿಯ ಬಳಿ ಹಾಲು ಕುಡಿಯಲು ಬಂದಿದೆ. ಆದರೇ ಮರಿ ಎದ್ದು ಬರುತ್ತಿದ್ದಂತೆ ಗಾಬರಿಯಾದ ಲಕ್ಷ್ಮೀ ತಕ್ಷಣ ಮರಿಗೆ ಒದ್ದಿದೆ. ಇದರಿಂದ ಆನೆಮರಿಯ ಎಡಗಾಲು ಮುರಿದಿದ್ದು, ತಕ್ಷಣ ವೈದ್ಯರು ಮರಿಯಾನೆಗೆ ಚಿಕಿತ್ಸೆ ನೀಡಿ ಮುರಿದಿರುವ ಕಾಲಿನ ಭಾಗಕ್ಕೆ ಪಟ್ಟಿ ಹಾಕಿದ್ದಾರೆ.

Bengaluru: Mother Elephant Breaks his baby Leg.
Bengaluru: Mother Elephant Breaks his baby Leg.

ಇನ್ನು ತಾಯಾನೆ ಲಕ್ಷ್ಮೀ ಮರಿಗೆ ಹಾಲು ಕುಡಿಸದ ಕಾರಣ ಮೊಲೆಹಾಲು ತೆಗೆದು ಮರಿಗೆ ಬಾಟಲಿ ಮೂಲಕ ಹಾಲು ಕುಡಿಸಲಾಗುತ್ತಿದೆ. ಅಷ್ಟೇ ಅಲ್ಲ ಆನೆ ಮರಿಗೆ ಹಾಲು ಸಾಕಾಗದ ಕಾರಣ ಕೃತಕ ಹಾಲನ್ನು ಗಂಟೆಗೊಮ್ಮೆ ಕುಡಿಸಲಾಗುತ್ತಿದ್ದು, ಬದುಕಿಸುವ ಪ್ರಯತ್ನ ನಡೆದಿದೆ.

ಇನ್ನು ಲಕ್ಷ್ಮೀ ಈ ವರ್ತನೆಗೆ ವೈದ್ಯರು ವಿಶ್ಲೇಷಣೆ ನೀಡಿದ್ದು, ಆನೆಗಳಲ್ಲಿ ಕೆಲವು ತಾಯಿಯಾಗುವ ಅನುಭವ ಹೊಂದಿರುವುದಿಲ್ಲ. ಮರಿಗೆ ಜನ್ಮ ನೀಡಿದ ಮೇಲೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಜನಿಸಿದ ಮರಿ ಮೇಲೆದ್ದು ತಾಯಿಯತ್ತ ಬರುವಾಗ ಗಾಭರಿಯಿಂದ ಒದೆಯುತ್ತವೆ. ಸಾಮಾನ್ಯವಾಗಿ ಕಾಡಾನೆಗಳಾದರೆ ಬೇರೊಂದು ಆನೆ ಮರಿ ಹಾಕುವುದನ್ನು ನೋಡಿ ಉಳಿದವುಗಳು ಪಾಠ ಕಲಿಯುತ್ತವೆ. ಆದರೆ ಲಕ್ಷ್ಮಿ ಮಠದಲ್ಲಿದ್ದುದರಿಂದ ಮರಿಯನ್ನು ಹೇಗೆ ಆರೈಕೆ ಮಾಡಬೇಕೆಂಬುದು ಗೊತ್ತಿಲ್ಲ. ಜನಿಸಿದ ಮರಿ ಬಳಿ ಬರುವುದನ್ನು ಕಂಡು ಗಾಬರಿ ಯಿಂದ ಒದ್ದಿರುವ ಸಾಧ್ಯತೆಯಿದೆ ಎಂದಿದ್ದಾರೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಆನೆ ಲಕ್ಷ್ಮೀ ಮತ್ತು ಮರಿಯಾನೆ ನಡುವೆ ಬಾಂಧವ್ಯ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ.

Watch Here: https://youtu.be/PXML_wYeI3I

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here