ಬಿಎಂಟಿಸಿ ಬಸ್ ನಲ್ಲಿ ಹುಡುಗಿ ಪಕ್ಕ ನಿಂತ ಮುದುಕ ಮಾಡಿದ್ದೇನು ಗೊತ್ತಾ?

ಎಷ್ಟೇ ಸುರಕ್ಷಿತ ವಾತಾವರಣ ಕಲ್ಪಿಸಿದರೂ ಕಾಮುಕರು ತಮ್ಮ ಚೇಷ್ಟೆ ಬಿಡೋದಿಲ್ಲ.

ಬಿಎಂಟಿಸಿ ಬಸ್​ನಲ್ಲೂ ಇಂತಹುದೇ ಕೃತ್ಯವೊಂದು ನಡೆದಿದ್ದು, ಇಳಿವಯಸ್ಸಿನ ತಾತನೊಬ್ಬ ಯುವತಿಗೆ ತಮ್ಮ ಖಾಸಗಿ ಅಂಗ ತಗುಲಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದ ಕಂಗಲಾದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕೋರಮಂಗಲದ ಪ್ರತಿಷ್ಠಿತ 100 ಫಿಟ್​ ರಸ್ತೆಯ ಈಝೋನ್​​ ಬಳಿ ಘಟನೆ ನಡೆದಿದ್ದು, ಮಾರ್ಚ್​ 13 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್​​ ನಂ ಕೆಎಎಸ್​​​​​57- ಎಫ್​​ 2654 ರಲ್ಲಿ ಸಂತ್ರಸ್ತ ಯುವತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಆಕೆಯ ಸೀಟ್​ ಪಕ್ಕ ವೃದ್ಧರೊಬ್ಬರು ನಿಂತಿದ್ದರು. ಈ ವೇಳೆ ಸಂತ್ರಸ್ತ ಯುವತಿ ನೀವು ಕುಳಿತುಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾಳೆ.

ಆದರೇ ಕುಳಿತಕೊಳ್ಳಲು ನಿರಾಕರಿಸಿದ ವೃದ್ಧ ಆಕೆಯ ಪಕ್ಕದಲ್ಲೇ ನಿಂತಿದ್ದಾರೆ. ಬಳಿಕ ತನ್ನ ಪ್ಯಾಂಟ್​ ಜಿಪ್​​ ಬಿಚ್ಚಿ ತನ್ನ ಖಾಸಗಿ ಅಂಗವನ್ನು ಆಕೆಯ ಕೈಗೆ ಉಜ್ಜಲಾರಂಭಿಸಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಇದೇನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾಳೆ. ಇದರಿಂದ ನಾಟಕ ಆರಂಭಿಸಿದ ಮುದುಕ ಆಕೆಯ ಮೇಲೆ ಎಗರಾಡಿದ್ದಾನೆ ಎನ್ನಲಾಗಿದೆ. ಬಳಿಕ ಸಹ ಪ್ರಯಾಣಿಕರು ನಿಮ್ಮ ತಂದೆಯ ವಯಸ್ಸಾಗಿದೆ ಹೋಗ್ಲಿ ಬಿಡಮ್ಮ ಎಂದು ಯುವತಿಯನ್ನು ಸಮಾಧಾನ ಮಾಡಿದ್ದಾರೆ. ಬಳಿಕ ಚಾಲಕ-ನಿರ್ವಾಹಕ ಆ ವೃದ್ಧರನ್ನು ಬಸ್​ನಿಂದ ಇಳಿಸಿ ಹೋಗಿದ್ದಾರೆ. ಈ ಘಟನೆಯಿಂದ ಬೇಸತ್ತ ಯುವತಿ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕ ಮುದುಕನಿಗಾಗಿ ಹುಡುಕಾಟ ನಡೆಸಿದ್ದಾರೆ.

Avail Great Discounts on Amazon Today click here