ಬೆಂಗಳೂರಲ್ಲಿ ಕನ್ನಡ ಮಾತಾಡಿದ್ರೆ ಕತ್ತು ಸೀಳ್ತಾರೆ !!ರಾಜಧಾನಿಯಲ್ಲಿ ಮಿತಿಮೀರಿದ ಪರಭಾಷಿಕರ ಕಾಟ !

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಮಾತಾಡೋದೇ ತಪ್ಪಾ? ಹೌದು ಕೇವಲ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಯುವತಿಯೊರ್ವಳ ಕತ್ತುಸೀಳಿ ಹತ್ಯೆ ಯತ್ನ ನಡೆಸಲಾಗಿದ್ದು, ಬೆಂಗಳೂರು ಬೆಚ್ಚಿಬಿದ್ದಿದೆ. ಹೌದು ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಗರದ ಮಾರತ್ ಹಳ್ಳಿಯ ಮುನ್ನೆಕೊಳಲಿನಲ್ಲಿ ಶಿಲ್ಪಾ ಎಂಬಾಕೆಯ ಮೇಲೆ ಹಲ್ಲೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಶಿಲ್ಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರದುರ್ಗ ಮೂಲದ ಹಣ್ಣು ವ್ಯಾಪಾರಿ ಮಗಳಾಗಿರುವ ಶಿಲ್ಪಾ ನಿನ್ನೆ ಮನೆಗೆ ತೆರಳುತ್ತಿದ್ದ ವೇಳೆ ಉತ್ತರ ಭಾರತದ ಕೆಲ ಯುವಕರು ಶಿಲ್ಪಾಳ ಬಳಿ ಹಿಂದಿಯಲ್ಲಿ ಅಡ್ರೆಸ್​​ ಕೇಳಿದ್ದಾರೆ. ಆದರೇ ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಶಿಲ್ಪಾ ಕನ್ನಡದಲ್ಲಿ ಉತ್ತರಿಸಿದ್ದಾಳೆ. ಆದರೇ ಉತ್ತರ ಭಾರತ ಮೂಲದ ಯುವಕರು ಮತ್ತೆ -ಮತ್ತೆ ಅಡ್ರೆಸ್​ ಕೇಳಿದ್ದಾರೆ. ಆಗಲೂ ಶಿಲ್ಪಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಯುವಕರು ಶಿಲ್ಪಾ ಕತ್ತು ಸೀಳಿ ಪರಾರಿಯಾಗಿದ್ದಾರೆ.

ತಕ್ಷಣ ಸ್ಥಳೀಯರು ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚಿಗೆ ನಗರದಲ್ಲಿ ಉತ್ತರ ಭಾರತ ಭಾಗದ ಪುಂಡರ ಹಾವಳಿ ಮಿತಿಮೀರಿದ್ದು ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

 

http://btvnewslive.com/news/raj-thackeray-says-on-karnataka-cm-siddaramaiah/

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here