ಗಣರಾಜ್ಯೋತ್ಸವಕ್ಕೆ ಮೆರುಗು ತಂದ ಸಾವಿರ ಅಡಿ ಧ್ವಜ

ಗಣರಾಜ್ಯೋತ್ಸವ ಅಂಗವಾಗಿ ಸಿಲಿಕಾನ ಸಿಟಿಯ ವಿವೇಕಾನಂದ ವೇದಿಕೆ ವಿನೂತನವಾಗಿ ಧ್ವಜ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಅಂಗವಾಗಿ ಸಾವಿರ ಅಡಿ ಧ್ವಜವನ್ನು ವಿದ್ಯಾರ್ಥೀಗಳು ರಸ್ತೆ ಬದಿಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗಿ ಪಥಸಂಚಲನ ನಡೆಸಿದರು. ಸುಮಾರು 2 ಸಾವಿರ ವಿದ್ಯಾರ್ಥಿಗಳು ಧ್ವಜವನ್ನು ಹಿಡಿದು ಸಾಗಿದ ದೃಶ್ಯ ಮನಮೋಹಕವಾಗಿತ್ತು. ಮಲ್ಲತಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ರಾಜರಾಜೇಶ್ವರಿ ಕ್ಷೇತ್ರದ ಮಾಜಿ ಕಾರ್ಪೋರೇಟರ್​ ರಾಮಚಂದ್ರಅವರು ಚಾಲನೆ ನೀಡಿದರು.

 

 

ಕನ್ಯಾಕುಮಾರಿ ಶಾಲೆಯಿಂದ ಸುಂಕದಕಟ್ಟೆಯ ಶಾಂತಿಧಾಮದವರೆಗೂ ನಡೆದ ಮೆರವಣಿಗೆಯಲ್ಲಿ ಚಿತ್ರನಟಿ ಅಮೂಲ್ಯ,ಅವರ ಪತಿ ಜಗದೀಶ್​ ಸೇರಿದಂಥೆ ಅನೇಕ ಬಿಜೆಪಿ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ಈ ಕಾರ್ಯಕ್ರಮದ ದೃಶ್ಯಾವಳಿಗಳನ್ನು ಮೇಲಿನಿಂದ ಚಿತ್ರಿಸಲಾಗಿದ್ದು, ಸುಂದರವಾಗಿ ಮೂಡಿಬಂದಿದೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here