ಗೌರಿ ಎದೆ ಹೊಕ್ಕಿದ ಗುಂಡು ಯಾರದ್ದು ? ಉತ್ತರ ಸಿಗದ ಪ್ರಶ್ನೆಗೆ ಎರಡು ತಿಂಗಳು !!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇವತ್ತಿಗೆ ಸರಿಯಾಗಿ ಎರಡು ತಿಂಗಳು ಕಳೆದಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆಯಾಗಿದ್ರೂ ದುಷ್ಕರ್ಮಿಗಳ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.

ಸೆಪ್ಟೆಂಬರ್ 5 ರಂದು ಸಂಜೆ ಗೌರಿ ಲಂಕೇಶ್ ಅವ್ರು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ಇಬ್ಬರು ಹಂತಕರು ಬೈಕ್ ನಲ್ಲಿ ಬಂದು ಮನೆ ಮುಂದೆ ಗುಂಡಿಟು ಹತ್ಯೆ ಮಾಡಿದ್ರು. ಬಳಿಕ ಸರ್ಕಾರ ಎಸ್ ಐ ಟಿ ರಚನೆ ಮಾಡಿ ಹಂತಕರ ಪತ್ತೆಗೆ ಬಲೆ ಬೀಸಿತ್ತು. ಕಳೆದ 60 ದಿನಗಳಲ್ಲಿ ಎಸ್ ಐ ಟಿ ಘಟನೆ ನಡೆದ 40 ದಿನಗಳ ಬಳಿಕ ಇಬ್ಬರ ಶಂಕಿತರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿತ್ತು.

ರೇಖಾಚಿತ್ರದಲ್ಲಿ ಇರುವವರನ್ನು ಕಂಡರೆ ಎಸ್ ಐ ಟಿ ಗೆ ಮಾಹಿತಿ ನೀಡಿ ಅಂತ ಎಸ್ ಐ ಟಿ ತಿಳಿಸಿತ್ತು. ಗೌರಿ ಲಂಕೇಶ್ ಪ್ರಕರಣದಲ್ಲಿ ಸುಮಾರು 120 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಎಸ್ ಐ ಟಿ ತಂಡದಲ್ಲಿ ಇದ್ದಾರೆ. ಇನ್ನು ಎಸ್ ಐ ಟಿ ತಂಡ ಇದುವರೆಗೂ ಸುಮಾರು 280 ಜನರನ್ನು ವಿಚಾರಣೆ ನಡೆಸಿದ್ದಾರೆ. ಅಲ್ದೆ 1000 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಪೊಟೆಜ್ ಗಳನ್ನು ಪರಿಶೀಲನೆ ಮಾಡಿದ್ದಾರೆ. ರೇಖಾಚಿತ್ರ ಬಿಡುಗಡೆ ಗೊಳಿಸದ ಸಂದರ್ಭದಲ್ಲಿ ಗೌರಿ  ಮನೆಯ ಸುತ್ತಮುತ್ತ ಓಡಾಡಿದ ಹಂತಕನ ಸಿಸಿಟಿವಿಯನ್ನು ಸಹ ಬಿಡುಗಡೆ ಗೊಳಿಸಿತ್ತು. ಹತ್ಯೆಗೆ ಬಜಾಜ್ ಪಲ್ಸರ್ 150 ಸಿಸಿ ಬೈಕ್ ಬಳಸಿರುವುದು  ಸಿಸಿಟಿವಿ ಸೆರೆಯಾಗಿತ್ತು. ಎಸ್ ಐ ಟಿ ಮುಖಸ್ಥ ಬಿಕೆ ಸಿಂಗ್ , ಹಾಗೂ ಡಿಸಿಪಿ ಗಳಾದ ಅನುಚೇತ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.