ರಿಯಾಲಿಟಿ ಶೋ ಸ್ಟಾರ್ ಸುನಾಮಿ ಕಿಟ್ಟಿ ಬಂಧನ!

Bengaluru: Tsunami Kitty Arrested For Assault on Man

ಸ್ನೇಹಿತನ ಪತ್ನಿಯ ಪ್ರಿಯತಮನೆಂದು ಭಾವಿಸಿ ಬಾರ್​ ಸಪ್ಲೈಯರ್​​ಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ವಿಜೇತ ಸುನಾಮಿ ಕಿಟ್ಟಿ ಪ್ರಕರಣ ದಾಖಲಾಗಿದೆ.

ad


ಸುನಾಮಿ ಕಿಟ್ಟಿ ವಿರುದ್ಧ ಜ್ಞಾನಭಾರತಿ ಪೊಲೀಸರು ಶಸ್ತ್ರಾಸ್ತ್ರ ಕಾಯಿದೆ ಸೇರಿದಂತೆ ಕಿಡ್ನಾಪ್​ ಜೀವಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುನಾಮಿ ಕಿಟ್ಟಿ ಸ್ನೇಹಿತ ಸುನೀಲ್​ನ ಪತ್ನಿ ತೌಶೀಕ್​ ಎಂಬಾತನ ಜೊತೆ ಸ್ನೇಹಸಂಬಂಧ ಹೊಂದಿದ್ದು, ಆತನೊಂದಿಗೆ ಸದಾಕಾಲ ಬಾರ್​ವೊಂದಕ್ಕೆ ಊಟಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ತೌಶೀಕ್ ಹಾಗೂ ಆತನ ಪ್ರಿಯತಮೆಗೆ ಗಿರೀಶ್​ ಎಂಬ ಬಾರ್​ ಸಪ್ಲೈಯರ್​​ ಒಬ್ಬ ಪರಿಚಯವಾಗಿದ್ದಾನೆ. ಆತನೊಂದಿಗೆ ಸುನೀಲ್ ಪತ್ನಿ ಆಗಾಗ ದೂರವಾಣಿಯಲ್ಲಿ ಮಾತನಾಡುತ್ತಿದ್ದರು.

ಇನ್ನು ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸುನಾಮಿ ಕಿಟ್ಟಿ ಹಾಗೂ ಆತನ ತಂಡ ತೌಶಿಕ್ ನನ್ನು ಕಿಡ್ನಾಪ್​ ಮಾಡಿ ಬೆದರಿಸುವ ಪ್ಲ್ಯಾನ್ ಮಾಡಿದೆ. ಆದರೇ ತೌಶೀಕ್​ ಎಂದು ಕನಪ್ಯೂಸ್ ಮಾಡಿಕೊಂಡ ಸುನಾಮಿ ಕಿಟ್ಟಿ ತಂಡ ಬಾರ್ ಸಪ್ಲೈಯರ್ ಗಿರೀಶ್​​ನನ್ನು ಕಿಡ್ನಾಪ್ ಮಾಡಿ ಹೆದರಿಸಿದೆ. ಸುನಾಮಿ ಕಿಟ್ಟಿ ಗನ್​ ಪಾಯಿಂಟ್​​ ಇಟ್ಟು ಗಿರೀಶ್​ನನ್ನು ಹೆದರಿಸಿದ್ದಾನೆ. ​ಬಳಿಕ ಆತ ತೌಶೀಕ್​ ಅಲ್ಲ ಎಂಬುದನ್ನು ಮನಗಂಡು ಬಿಟ್ಟು ತೆರಳಿದ್ದರು.
ಇದರಿಂದ ಹೆದರಿದ ಗಿರೀಶ್​​ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುನಾಮಿ ಕಿಟ್ಟಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಅಲ್ಲದೇ ಸುನಾಮಿ ಕಿಟ್ಟಿ, ಸುನೀಲ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ.
ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುನೀಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರಾಮಮೂರ್ತಿ ನಗರ ನಿವಾಸಿಯಾಗಿರುವ ಸುನೀಲ್ ಪತ್ನಿ, ಕಿವಿಯೊಲೆಯಲ್ಲಿರುವ ಡೈಮೆಂಡ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಸ್ನೇಹಿತನ ಪತ್ನಿ ಲವ್​ ಕೇಸ್​​ ಬಗೆಹರಿಸಲು ಹೋದ ಸುನಾಮಿ ಕಿಟ್ಟಿ ಜೈಲುಪಾಲಾಗಿದ್ದಾನೆ.