ಬೆಂಗಳೂರು ಯುವತಿಯರೇ ರಸ್ತೆಗಿಳಿಯುವ ಮುನ್ನ ಈ ವಿಡಿಯೋ ನೋಡಿ!

 

ಬೆಂಗಳೂರಿನಲ್ಲಿ ಮಹಿಳೆಯರಿಗೇ ಸೆಕ್ಯೂರಿಟಿಯೇ ಇಲ್ಲವೇ? ಮಹಿಳೆಯರು ಮನೆಯಿಂದ ಆಚೆ ಬರೋದೆ ಅಪರಾಧವೇ ಎಂಬ ಪ್ರಶ್ನೆ ಉದ್ಭವವಾಗಿದ್ದು, ಹೌದು ಸರಗಳ್ಳರ ಬಳಿಕ ಇದೀಗ ಪುಂಡರ ಹಾವಳಿ ಎಲ್ಲೆ ಮೀರಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಪುಂಡನೊಬ್ಬ ಝಾಡಿಸಿ ಒದ್ದು ದೌರ್ಜನ್ಯ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

 

ಕಳೆದ ಭಾನುವಾರ ಬಾಣಸವಾಡಿಯ ಕರಿಯಣ್ಣನ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಸಂಜೆ ವೇಳೆ ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಇಬ್ಬರು ಪುಂಡರು ದ್ವಿಚಕ್ರವಾಹನದಲ್ಲಿ ಅಸಭ್ಯವಾಗಿ ವರ್ತಿಸುತ್ತ ಆಗಮಿಸಿದ್ದು, ಹಿಂದಿನ ಸವಾರ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಝಾಡಿಸಿ ಎದೆ ಹಾಗೂ ಬೆನ್ನು ಭಾಗಕ್ಕೆ ಒದೆದಿದ್ದಾನೆ. ಇದರಿಂದ ತಕ್ಷಣ ಆಯತಪ್ಪಿದ ಯುವತಿ ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದ್ದಾಳೆ. ಇನ್ನು ಹೀಗೆ ಆ ಯುವಕ ಅಸಭ್ಯವಾಗಿ ಯುವತಿಗೆ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ದೃಶ್ಯಾವಳಿ ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ. ಆದರೇ ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಇನ್ನು ಬಾಣಸವಾಡಿ ಸುತ್ತಮುತ್ತಲ ಏರಿಯಾದಲ್ಲಿ ಸಂಜೆ ವೇಳೆ ಪುಂಡರು ಈ ರೀತಿ ದ್ವಿಚಕ್ರವಾಹನದಲ್ಲಿ ಸಂಚರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಆದರೇ ಪೊಲೀಸರು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.