ಪರಪ್ಪನ ಅಗ್ರಹಾರ ಭ್ರಷ್ಟಾಚಾರ ಸಾಬೀತು- ರೂಪ ಆರೋಪ ಪುಷ್ಟಿಕರಿಸಿದ ತನಿಖೆ- ಗೃಹ ಇಲಾಖೆ ಕೈಸೇರಿದ ತನಿಖಾ ವರದಿ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪರಪ್ಪನ ಅಗ್ರಹಾರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಾರಾಗ್ರಹ ಡಿಜಿಪಿ ಡಿ.ರೂಪಾ ನೀಡಿರುವ ವರದಿಯಲ್ಲಿ ಸತ್ಯಾಂಶ ಇದೆ ಎಂಬುದು ಮತ್ತೆ ಸಾಬೀತಾಗಿದೆ. ಪರಪ್ಪನ ಅಗ್ರಹಾರದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಜಿಪಿ ರೂಪಾ ನೀಡಿರುವ ವರದಿಯಲ್ಲಿ ಸತ್ಯಾಂಶ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿನಯ್ ಕುಮಾರ್ ನೇತ್ರತ್ವದಲ್ಲಿ ನಡೆದ ತನಿಖೆ ದೃಡಪಡಿಸಿದ್ದು, ವರದಿಯನ್ನು ಅವರು ಗೃಹ ಇಲಾಖೆಗೆ ಸಲ್ಲಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಅನ್ನೋ ವರದಿಯ ಸತ್ಯಾಂಶವನ್ನು ತನಿಖೆ ನಡೆಸಲು ನಿವೃತ್ತ ಐಪಿಎಸ್ ಅಧಿಕಾರಿ ವಿನಯ್ ಕುಮಾರ್ ಸಮಿತಿಗೆ ಸರ್ಕಾರ ವಹಿಸಿತ್ತು.

ಇದೀಗ ಮೂರು ತಿಂಗಳು ತನಿಖೆ ನಡೆಸಿ ವರದಿಯನ್ನು ವಿನಯ್ ಕುಮಾರ್ ಗೃಹ ಇಲಾಖೆ ಗೆ ಸಲ್ಲಿಸಿದ್ದಾರೆ. ವರದಿ ಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೆಲಸ ಮಾಡ್ತಾ ಇದ್ದ ಕೆಲ ಸಿಬ್ಬಂದಿಗಳು  ಎಐಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಬಳಿ ಲಂಚ ಸ್ವೀಕಾರ ಮಾಡಿರೊದು ಸಾಬೀತಾಗಿದೆ . ಅಲ್ಲದೇ ಶಶಿಕಲಾಗೆ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯ ನೀಡಲು ಕೂಡ ಇವರು ಸಾಥ್ ನೀಡಿದ್ದರು ಅನ್ನೋದು ವರದಿಯಲ್ಲಿ ಉಲ್ಲೇಖವಾಗಿದೆ . ಇನ್ನೂ  ಕೆಲ ಖೈದಿ ಕಾರಾಗ್ರಹದಲ್ಲಿ ತಮಗೆ ಬೇಕಾದ ಹಾಗೆ ತಿರುಗಾಡ್ತಾ ಇದ್ದಿದ್ದು , ಡ್ರಿಂಕ್ಸ್ ಹಾಗೂ ಬಿರಿಯಾನಿ ತಂದು ತಿನ್ನುತ್ತಾ ಇದ್ದಿದ್ದು ಕೂಡಾ ಸಾಬೀತಾಗಿದೆ. ಅಲ್ಲದೇ  ಈ ಕೃತ್ಯಗಳಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದಾರೆ ಅನ್ನೋ ಅಂಶ ಕೂಡ ತನಿಖೆಯಲ್ಲಿ ಬಯಲಾಗಿದ್ದು  ವರದಿಯಲ್ಲಿ ಉಲ್ಲೇಖವಾಗಿದೆ.