ನಾಳೆ ಭಾರತ ಬಂದ್​- ಏನಿರುತ್ತೆ ಏನಿರಲ್ಲ?

 

ad


 

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮೋಟಾರು ವಾಹನ ಕಾಯ್ದೆ ವಿರೋಧಿಸಿ ನಾಳೆ ಬಂದ್​ ಗೆ ಕರೆ ನೀಡಲಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಷ್ಕರ ಭಾಗಶಃ ಯಶಸ್ಸು ಕಾಣುವ ಮುನ್ಸೂಚನೆ ದೊರೆತಿದೆ. ಕೆ.ಎಸ್.ಆರ್.ಟಿಸಿ, ಬಿಎಂಟಿಸಿ ಓಡಾಟ ಎಂದಿನಂತೆ ಇರಲಿದ್ದು, ಇದನ್ನು ಹೊರತುಪಡಿಸಿ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ.
ಹಲವು ತಿದ್ದುಪಡಿಗಳನ್ನು ಒಳಗೊಂಡ ಮೋಟಾರು ವಾಹನ ಕಾಯ್ದೆ 2017 ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಬೇಕಿದೆ. ಆದರೇ ಈ ಕಾಯ್ದಿದೆಯಲ್ಲಿನ ತಿದ್ದುಪಡಿಗಳನ್ನು ವಿರೋಧಿಸಿ ಮುಷ್ಕರ ಹಮ್ಮಿಕೊಳ್ಳಲು ಸಾರಿಗೆ ಸಂಸ್ಥೆಗಳು ತೀರ್ಮಾನಿಸಿವೆ.

ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 6 ರಿಂದ ಸಂಜೆ 6 ಬಂದ್​ ನಡೆಯಲಿದ್ದು, ಓಲಾ-ಊಬರ್ ಸೇರಿದಂತೆ ಹಲವು ಖಾಸಗಿ ಸಾರಿಗೆ ಸಂಘಗಳು ಬಂದ್ ಬೆಂಬಲಿಸಿವೆ. ನಗರದ ಟೌನ್ ಹಾಲ್​ನಿಂದ ಪ್ರೀಡಂಪಾರ್ಕ್​ ವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಿಐಟಿಯು ಉಪಾಧ್ಯಕ್ಷ ಪ್ರಕಾಶ ತಿಳಿಸಿದ್ದಾರೆ.
ಇನ್ನು ಈ ಕಾಯ್ದೆ ಜಾರಿಯಿಂದ ವಾಹನ ನೋಂದಣಿಯಿಂದ ಆರಂಭಿಸಿ, ಪ್ರತಿಯೊಂದು ಖಾಸಗಿಯವರ ಪಾಲಾಗಲಿದ್ದು, ರಾಜ್ಯಗಳ ಅಧಿಕಾರ ಮೊಟಕುಗೊಳ್ಳಲಿದೆ. ಅಲ್ಲದೇ ವಾಹನ ಚಾಲನೆ ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದ್ರೆ 5 ಸಾವಿರ ರೂ ದಂಡ, ಸಿಗ್ನಲ್​ ಜಂಪ್​ ಮಾಡಿದ್ರೆ 2 ಸಾವಿರ ರೂಪಾಯಿಗಳಷ್ಟು ಭಾರಿ ದಂಡ ವಿಧಿಸಬೇಕಿದೆ. ಈ ಎಲ್ಲ ಕಾರಣಗಳಿಗಾಗಿ ಬಂದ್ ಹಮ್ಮಿಕೊಳ್ಳಲಾಗಿದೆ. ಆದರೇ ಸರ್ಕಾರಿ ಸಾರಿಗೆ ವ್ಯವಸ್ಥೆ ಎಂದಿನಂತೆ ಕೆಲಸ ನಿರ್ವಹಿಸೋದರಿಂದ ಬಂದ್​ ಯಶಸ್ವಿಯಾಗೋ ಸಾಧ್ಯತೆಗಳು ಕಡಿಮೆಯಾಗಿದೆ.