ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ದೇವೇಗೌಡರ ಸೊಸೆ ಏನಂದ್ರು?

ಮಗ ಪ್ರಜ್ವಲ್ ಗೆ ಟಿಕೇಟ್ ಸಿಗದಿದ್ದಕ್ಕೆ ಬೇಸರ ಆಗಿರುವುದು ನಿಜ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವ್ರು ಆರ್ ಆರ್ ನಗರಕ್ಕೆ ಪ್ರಜ್ವಲ್ ಸ್ಪರ್ಧೆಗೆ ಟಿಕೇಟ್ ಗೆ ಅಕಾಂಕ್ಷಿಯಾಗಿದ್ದ, ಆದ್ರೆ ಕೊನೆ ಕ್ಷಣದಲ್ಲಿ ದೇವೇಗೌಡರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.

ದೇವೇಗೌಡರೇ ಪ್ರಜ್ವಲ್ ಬೆಳೆಸುವ ಹೊಣೆ ಹೊತ್ತಿದ್ದಾರೆ. ಇನ್ನೂ ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದವರು ಪ್ರಜ್ವಲ್ ಟಿಕೇಟ್ ವಿಚಾರವಾಗಿ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಇದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ರು. ಅಲ್ಲದೇ ನಾನು ನಾಳೆಯಿಂದ ಮತ ಪ್ರಚಾರದಲ್ಲಿ ತೊಡಗುತ್ತೇನೆ ಎಂದ ಭವಾನಿ, ಮಗನನ್ನ ಎಂಪಿ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದರು.

 

Avail Great Discounts on Amazon Today click here